ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರವೂ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (PMEGP)ಯೋಜನೆಯಡಿ ಕೈಗಾರಿಕೆ ಮತ್ತು ಸೇವಾ ಘಟಕಗಳನ್ನು ಪ್ರಾರಂಭಿಸಲು ಸಾಲ ಪಡೆಯಲು ಇಚ್ಛಿಸುವ ನಗರ ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಘಟಕದ ಗರಿಷ್ಠ ಯೋಜನಾ ವೆಚ್ಚ ಕೈಗಾರಿಕಾ ಚಟುವಟಿಕೆಗಳಿಗೆ ರೂ.25.00 ಲಕ್ಷ ಹಾಗೂ ಸೇವಾ ಚಟುವಟಿಕೆಗಳಿಗೆ ರೂ.10.00 ಲಕ್ಷ ಆಗಿರುತ್ತದೆ. ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯಲ್ಲಿರಬೇಕು. ಘಟಕದ ಯೋಜನಾ ವೆಚ್ಚ ಕೈಗಾರಿಕಾ ಚಟುವಟಿಕೆ ರೂ. 10.00 ಲಕ್ಷ ಹಾಗೂ ಸೇವಾ ಚಟುವಟಿಕೆÉ ರೂ. 5.00 ಲಕ್ಷ ಮೇಲ್ಪಟ್ಟಿದ್ದರೆ ಅಭ್ಯರ್ಥಿಗಳು ಕನಿಷ್ಠ 8 ನೇ ತರಗತಿ ಪಾಸಾಗಿರಬೇಕು. ಆದಾಯದ ಮಿತಿ ಇರುವುದಿಲ್ಲ. ಸದರಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕಾಗಿದ್ದು, ಆಸಕ್ತ ಅಭ್ಯಥಿಗಳು ಆಯೋಗದ ವೆಬ್ಸೈಟ್ www.kviconline.gov.in ನಲ್ಲಿ ಮಾಹಿತಿಗಳನ್ನು ನವ್ಹಂಬರ 25-11-2017 ರೊಳಗಾಗಿ ಭರ್ತಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ, ದೂರವಾಣಿ ಸಂಖ್ಯೆ: (08382) 282302, 282367, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು, 9448633354, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರವಾರ, ದೂರವಾಣಿ ಸಂಖ್ಯೆ: (08382) 226506 ಸಂಪರ್ಕಿಸುವುದು.
Leave a Comment