ಹಳಿಯಾಳ:
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಇಂಜನೀಯರಿಂಗ್ ಕಾಲೇಜಿನಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಂಗಳೂರೇತರ ವಿಭಾಗ ಮಟ್ಟದ ಅಂತರ ಕಾಲೇಜುಗಳ ನೆಟ್ಬಾಲ್ ಪಂದ್ಯಾವಳಿಯಲ್ಲಿ ಹಳಿಯಾಳದ ಕರ್ನಾಟಕ ಲಾ ಸೊಸೈಟಿ ವಿಶ್ವನಾಥರಾವ್ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಗಳಿಸಿ ಸಾಧನೆ ಮಾಡಿದ್ದಾರೆಂದು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಎಸ್. ಯಳ್ಳೂರ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಮಹಾವಿದ್ಯಾಲಯದ ತಂಡದ ವಿದ್ಯಾರ್ಥಿಗಳಾದ ಶುಭಮ್ ಎಮ್ (ನಾಯಕ), ಸಿದ್ದಾರ್ಥ ಡಿ, ಅಕ್ಷಯ ಕೆ, ಸಾಗರ್ ಬಿ, ಸಮೇದ ಎನ್.ಆರ್, ಪ್ರವೀಣ ಡಿ.ಜೆ, ಅಭಿಲಾಶ ಆರ್, ವೆಂಕಟೇಶ, ಸಂಗಮೇಶ ಟಿ, ಸಂಗಮೇಶ, ವಿನಾಯಕ, ವಿಕಾಸ ಹಾಗೂ ಅರುಣ ಸಾಧನೆಗೈದ ವಿದ್ಯಾರ್ಥಿಗಳಾಗಿದ್ದು ಮಹಾವಿದ್ಯಾಲಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
‘
Leave a Comment