ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, ಕ್ರಾಂತೀವಿರರು ಹೋರಾಟ ಮಾಡಿದ್ದು ಅವರ ತತ್ವಾದರ್ಶಗಳನ್ನು, ದೇಶಾಭಿಮಾನವನ್ನು ನಾವುಗಳು ಆದರ್ಶವಾಗಿಟ್ಟುಕೊಂಡು ನಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಹಳಿಯಾಳ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಹೇಳಿದರು.ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, ಕ್ರಾಂತೀವಿರರು ಹೋರಾಟ ಮಾಡಿದ್ದು ಅವರ ತತ್ವಾದರ್ಶಗಳನ್ನು, ದೇಶಾಭಿಮಾನವನ್ನು ನಾವುಗಳು ಆದರ್ಶವಾಗಿಟ್ಟುಕೊಂಡು ನಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಹಳಿಯಾಳ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಹಾಗೂ ಜಯ ಕರ್ನಾಟಕ ಸಂಘಟನೆಯ 6ನೇ ವಾರ್ಷಿಕೋತ್ಸವದ ನಿಮಿತ್ತ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಹಮ್ಮಿಕೊಂಡ ಕನ್ನಡ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಳಿಯಾಳ ಪವಾಡ ಮಾತೆ ದೇವಾಲಯದ ಫಾ.ಜ್ಞಾನಪ್ರಕಾಶರಾವ, ಆದಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮೀಜಿ, ಮುಪ್ತೀ ಫಯಾಜ ಇಟ್ಟಂಗಿವಾಲೆ ಅವರು ಕಾರ್ಯಕ್ರಮದ ಉಧ್ಘಾಟನೆ ನೆರವೆರಿಸಿದರು. ಕಾರ್ಯಕ್ರಮದಲ್ಲಿ ಹಳಿಯಾಳ ಪಟ್ಟಣದ ಸ್ವಚ್ಚತೆಗೆ ದಿನನಿತ್ಯ ಶ್ರಮಿಸುತ್ತಿರುವ ಪಟ್ಟಣದ ಪುರಸಭೆಯ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರನ್ನು ಸನ್ಮಾನಿಸಲಾಯಿತು. ಸುಮಾರು 2ಗಂಟೆಗಳ ಕಾಲ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಅಧಿಕ ಯುವಕ, ಯುವತಿಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಬಸವ ಕೇಂದ್ರದ ಚಂದ್ರಕಾಂತ ಅಂಗಡಿ, ಉಪನ್ಯಾಸಕ ಎಸ್.ಎಸ್.ಅಂಗಡಿ, ಸಂಘಟನೆ ಉಪಾಧ್ಯಕ್ಷ ಶಿರಾಜ ಮುನವಳ್ಳಿ, ಮಹೇಶ ಹುಲಕೊಪ್ಪ, ಗಣೇಶ ಗೂಸಪ್ಪನವರ, ಗೋಪಾಲ ಗರಗ, ಸತೀಶ ಚಲವಾದಿ, ಸುಭಾಷ ಕೊಲಕಾರ, ವಿಕ್ರಾಂತ ಶೆಟ್ಟಿ, ಮಹಾದೇವ ಚಲವಾದಿ, ಪರಶುರಾಮ, ವಿಜಯ, ಕಿರಣ ಇನ್ನಿತರರು ಇದ್ದರು.
Leave a Comment