ಕಾರವಾರ:
ಐವತ್ತು ಅಡಿ ಎತ್ತರದ ಗುಡ್ಡದಿಂದ ಕಡವೆ ಮರಿಯೊಂದು ಜಾರಿ ಬಿದ್ದ ಘಟನೆ ಬಿಣಗಾದಲ್ಲಿ ನಡೆದಿದೆ.
ಬಿಣಗಾದ ಸಂಕ್ರುಭಾಗ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳು ಕಂಡು ಬರುತ್ತವೆ. ಇಲ್ಲಿ ಕಡವೆ ಹೇರಳವಾಗಿದ್ದು, ಭಾನುವಾರ ಗುಡ್ಡ ಪ್ರದೇಶದಿಂದ 8 ತಿಂಗಳ ಹೆಣ್ಣು ಕಡವೆ ನೆಲಕ್ಕೆ ಅಪ್ಪಳಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಎತ್ತರದಿಂದ ಬಿದ್ದ ಪರಿಣಾಮ ಕಡವೆಯ ಮುಂಗಾಲು ಮುರಿದಿದ್ದು, ಅರಣ್ಯ ಇಲಾಖೆಯವರು ಪ್ರಾಥಮಿಕ ಚಿಕಿತ್ಸೆ ಮಾಡಿದರು. ನಂತರ ಗ್ರಾಮಸ್ಥರ ಸಹಾಯದೊಂದಿಗೆ ಆರೈಕೆ ಮಾಡಲಾಯಿತು. ಪಶು ಇಲಾಖೆ ವೈದ್ಯರು ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ಪ್ರಸ್ತುತ ಕಡವೆಯನ್ನು ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಇರಿಸಲಾಗಿದೆ. ಮರಿ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅದನ್ನು ಮರಳಿ ಕಾಡಿಗೆ ಬಿಡುವದಾಗಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ತಿಳಿಸಿದರು.
Leave a Comment