ಕಾರವಾರ:
ರೋಟರಿ ಕ್ಲಬ್ ಆಶ್ರಯದಲ್ಲಿ ಬಾಲಕಿಯರ ಇಂಟರೆಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭವು ಶಿವಾಜಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನೆಡೆಯಿತು.
ನೂತನವಾಗಿ ಆಯ್ಕೆಯಾದ ಇಂಟರೆಕ್ಟ್ ಕ್ಲಬ್ನ ಅಧ್ಯಕ್ಷೆ ಜಯಶ್ರೀ ಲಮಾಣಿ ಮತ್ತು ಕಾರ್ಯದರ್ಶಿ ಭಾಗ್ಯ ವಡ್ಡರ, ಸಂಘಟನಾ ಕಾರ್ಯದರ್ಶಿ ಶ್ವೇತಾ ಗೌಡ, ಖಜಾಂಚಿ ಸಹನಾ ಹಾಗೂ ಇತರೆ ಪದಾಧಿಕಾರಿಗಳಿಗೆ ಪದಗ್ರಹಣವನ್ನು ಮನೋಹರ ಕಾಂಬಳಿಯವರು ಬೋಧನೆ ಮಾಡಿ, ಬಳಿಕ ಇಂಟರೆಕ್ಟ ಕ್ಲಬ್ ಸ್ಥಾಪನೆಯ ಉದ್ದೇಶ, ಮಕ್ಕಳಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಸಹಾಯವಾಗುವುದರ ಬಗ್ಗೆ ವಿವರಿಸಿದರು.
ಅತಿಥಿಯಾಗಿ ಆಗಮಿಸಿದ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಕಿ ಸಿ. ಎನ್. ನಾಯ್ಕ ಮಾತನಾಡಿ, ರೋಟರಿ ಕ್ಲಬ್, ಇಂಟರೆಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ನಡೆಸುತ್ತಿರುವುದು ಎರಡನೇ ವರ್ಷದಾಗಿದ್ದು, ತಮ್ಮ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದ ಅವರು ರೋಟರಿ ಕ್ಲಬ್ ನ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ವೆರ್ಣೇಕರ ಮಾತನಾಡಿ, ತಮ್ಮ ಕ್ಲಬ್ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ತಾವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ, ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ಮಹತ್ತರ ಕಾರ್ಯ ನಿರ್ವಹಿಸಲು ಒಳ್ಳೆಯ ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ಸಹಾಯ ಮಾಡಿದಂತಾಗುತ್ತದೆ ಎಂದರು. ಇಂಟರೆಕ್ಟಕ್ಲಬ್ ಅಧ್ಯಕ್ಷ ಸುರೇಶ ನಾಯ್ಕ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸಾತಪ್ಪ ತಾಂಡೇಲ ವಂದಿಸಿದರು. ಡಾ. ಸಮೀರ, ಕುಮಾರ ನಾಯಕ ನಿರ್ವಹಿಸಿದರು.
ರೋಟರಿ ಹಿರಿಯ ಸದಸ್ಯ ಪಿ.ಎಂ. ತಾಂಡೇಲ ಮತ್ತು ಇತರೆ ಸದಸ್ಯರಾದ ರೋ. ಅಮರನಾಥ ಶೆಟ್ಟಿ, ರೋ. ಅರ್ಚನಾ ಶೆಟ್ಟಿ, ರೋ. ಎಲ್. ಎಸ್. ಫರ್ನಾಂಡಿಸ್, ರೋ. ನಾಗರಾಜ ಜೋಶಿ ಹಾಗೂ ರೋ. ರಾಘವೇಂದ್ರ ಪ್ರಭು ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಬಾಲಕಿಯರು ಹಾಜರಿದ್ದರು.
Leave a Comment