ಹಳಿಯಾಳ: ದಿ.16 ರಂದು ಹಳಿಯಾಳದಲ್ಲಿ ನಡೆದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮರಾಠಾ ಸಮಾಜದವರಾದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನಿಸಿದ್ದು ಹಾಗೂ ಪ್ರಚಾರಾರ್ಥವಾಗಿ ಹಾಕಿರುವ ಅವರ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆಗೆದು, ಹರಿದು ಹಾಕಿದ್ದನ್ನು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ತೀವೃವಾಗಿ ಖಂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ನ ತಾಲೂಕಾಧ್ಯಕ್ಷ ಎಸ್.ಎಲ್.ಘೋಟ್ನೇಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಹಳಿಯಾಳ: ದಿ.16 ರಂದು ಹಳಿಯಾಳದಲ್ಲಿ ನಡೆದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಮರಾಠಾ ಸಮಾಜದವರಾದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಅವರ ಸ್ಥಾನಮಾನಕ್ಕೆ ಗೌರವ ನೀಡದೆ ಅವಮಾನಿಸಿದ್ದು ಹಾಗೂ ಪ್ರಚಾರಾರ್ಥವಾಗಿ ಹಾಕಿರುವ ಅವರ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆಗೆದು, ಹರಿದು ಹಾಕಿದ್ದನ್ನು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ತೀವೃವಾಗಿ ಖಂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ನ ತಾಲೂಕಾಧ್ಯಕ್ಷ ಎಸ್.ಎಲ್.ಘೋಟ್ನೇಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠಾ ಸಮಾಜದವರಿದ್ದು ಎಲ್ಲ ಪಕ್ಷಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಿವೃತ್ತ ಎಸ್ಪಿ ಹಾಗೂ ಮರಾಠಾ ಸಮುದಾಯ ಪ್ರತಿನಿಧಿಸುವ ಜಿ.ಆರ್.ಪಾಟೀಲ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದು ದಿ.16 ರಂದು ಬಿ.ಜೆ.ಪಿ. ಪಕ್ಷದ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಹಾಕಿದ್ದ ಪಾಟೀಲ್ ಅವರ ಭಾವಚಿತ್ರ ಇರುವ ಫ್ಲೇಕ್ಸ ಹಾಗೂ ಬ್ಯಾನರ್ಗಳನ್ನು ತೆಗೆದು ಹರಿದು ಹಾಕಿದ್ದು ಹಾಗೂ ಆ ಪಕ್ಷದಲ್ಲಿರುವ ಕೆಲವರು ತಮ್ಮ ಪುಂಡ ಪೋಕರಿಗಳಿಂದ ಜಿ.ಆರ್. ಪಾಟೀಲ್ರವರಿಗೆ ವೇದಿಕೆ ಏರಲು ಅಡ್ಡಿಪಡಿಸಿ, ವೇದಿಕೆಯಲ್ಲಿ ಅವರ ಸ್ಥಾನಮಾನಕ್ಕೆ ತಕ್ಕಂತೆ ಸರಿಯಾದ ಸ್ಥಾನವನ್ನು ನಿಡದೇ ಅವಮಾನಿಸಿರುವ ಸಂಗತಿ ಸಮಾಜದ ಗಮನಕ್ಕೆ ಬಂದಿದ್ದು ಇದು ಈ ಕ್ಷೇತ್ರದ ಬಹುಸಂಖ್ಯಾತರಾದ ಮರಾಠಾ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದಿರುವ ಘೋಟ್ನೇಕರ ಇದನ್ನು ತಾವು ಸಹಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಅವರವರ ಸ್ಥಾನಮಾನಕ್ಕೆ ತಕ್ಕಂತೆ ನ್ಯಾಯಯುತವಾಗಿ ಗೌರವ ಸಿಗಬೇಕು. ಹಳಿಯಾಳ ತಾಲೂಕು ಹಾಗೂ ತಾಲೂಕಿನ ಮರಾಠಾ ಸಮಾಜದಿಂದ ಸರಕಾರಿ ಸೇವೆಯಲ್ಲಿ ಎಸ್.ಪಿ.ಯಂತಹ ಉನ್ನತ ಹುದ್ದೆಗೇರಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಜಿ.ಆರ್. ಪಾಟೀಲ್ರವರು ಒಬ್ಬರು. ಅವರು ಆ ಪಕ್ಷದ ಸಂಘಟನೆಯ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿ ಹಳಿಯಾಳ, ಜೋಯಿಡಾ, ರಾಮನಗರ ಭಾಗಗಳ ಗ್ರಾಮಾಂತರದಲ್ಲಿ ಪ್ರವಾಸ ಮಾಡಿ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ. ಹೀಗೆ ಪಕ್ಷಕ್ಕೆ ಶಕ್ತಿಯಾಗಿ ನಿಂತಿರುವ ಒಬ್ಬ ಬಹುಸಂಖ್ಯಾತ ಮರಾಠಾ ಸಮಾಜದ ಗಣ್ಯಮಾನ್ಯ ವ್ಯಕ್ತಿಯೊಂದಿಗಿನ ಈ ಅಗೌರವವನ್ನು ತಾಲೂಕಿನ ಮರಾಠಾ ಸಮಾಜವು ತೀವೃವಾಗಿ ಖಂಡಿಸುತ್ತದೆ. ಸಮಾಜದ ಯಾವುದೇ ವ್ಯಕ್ತಿಯೊಂದಿಗಿನ ಅಗೌರವವನ್ನು ಸಹಿಸುವುದಿಲ್ಲ. ಇಂತಹ ದುರ್ಘಟನೆಗಳು ಪುನರಾವರ್ತಿಸದಂತೆ ಆ ಪಕ್ಷದ ಸಂಬಂದಿತ ಪ್ರಮುಖರು ಎಚ್ಚರವಹಿಸಲಿ ಎಂದು ಆಗ್ರಹಿಸುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ವ್ಯಕ್ತಿಗಳೊಂದಿಗೆ ಅಗೌರವ ತೊರಿಸಿದಲ್ಲಿ ಸಮಾಜವು ಒಟ್ಟಾಗಿ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಎಚ್ಚರಿಕೆಯಾಗಿದೆ ಎಂದು ಅವರು ಲಿಖಿತ ಹೇಳಿಕೆ ನೀಡಿದ್ದು ಪರಿಷತ್ನ ಉಪಾಧ್ಯಕ್ಷೆ ಮಂಗಲಾ ಕಶೀಲಕರ, ಗೌರವ ಕಾರ್ಯದರ್ಶಿ ಬಿಪಿ ಶಹಾಪೂರಕರ ಸಹಿ ಒಳಗೊಂಡಿದೆ.
Leave a Comment