ಕಾರವಾರ: ಕರ್ನಾಟಕ ಲೋಕಾಯುಕ್ತ ಕಾರವಾರ ಘಟಕದಿಂದ ಜಿಲ್ಲೆಯ ವಿವಿಧೆಡೆಗಳಲ್ಲಿನವೆಂಬರ್ 21ರಿಂದ 25ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನವೆಂಬರ 21 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೊನ್ನವರ, ಜೊಯಿಡಾ, ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ, ನವೆಂಬರ 22 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭಟ್ಕಳ, ಕಾರವಾರ, ಹಳಿಯಾಳ ಪ್ರವಾಸಿ ಮಂದಿರದಲ್ಲಿ, ನವೆಂಬರ 23 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಲ್ಲಾಪುರ, ಶಿರಸಿ ಪ್ರವಾಸಿ ಮಂದಿರದಲ್ಲಿ, ನವೆಂಬರ್ 23ರಂದು ಮುಂಡಗೋಡ, ಅಂಕೋಲಾ ಹಾಗೂ ನವೆಂಬರ್ 25ರಂದು ಕುಮಟಾ ಪ್ರವಾಸಿಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಲೋಕಾಯುಕ್ತÀ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
Leave a Comment