ಕಾರವಾರ:
ಕರಾವಳಿಯಲ್ಲಿ ಮಂಗಳವಾರದಿಂದ ಸಾಗರ ಕವಚ ಅಣಕು ಕಾರ್ಯಾಚರಣೆ ಶುರುವಾಗಿದೆ.
ಸಮುದ್ರ ಮಾರ್ಗ ಅಥವಾ ಪಕ್ಕದ ರಾಜ್ಯದಿಂದ ದುಷ್ಕರ್ಮಿಗಳು ಜಿಲ್ಲೆಯೊಳಗೆ ನುಸುಳದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಇದನ್ನು ಹಮ್ಮಿಕೊಳ್ಳಲಾಗಿದೆ. ಪೆÇಲೀಸ್ ಇಲಾಖೆ, ಕರಾವಳಿ ಕಾವಲು ಪೆÇಲೀಸ್ ಪಡೆ, ತಟರಕ್ಷಕ ಪಡೆ ಹಾಗೂ ರೆಡ್ ಫೆÇೀರ್ಸ್ ಇವುಗಳ ಸಹಕಾರದಲ್ಲಿ ಅಣಕು ಪ್ರದರ್ಶನ ಕಾರ್ಯಾಚರಣೆ ನಡೆದಿದೆ. ನ. 21ರಂದು ಬೆಳಗ್ಗೆ 6 ಗಂಟೆಯಿಂದ 22ರ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ನಡೆಯಲಿದೆ. ಅನುಮಾನಾಸ್ಪದ ವ್ಯಕ್ತಿ, ವಸ್ತು, ಬಾಂಬ್‍ಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ಇದಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೀಬರ್ಡ್, ಕೈಗಾ, ಕದ್ರಾ ಆಣೆಕಟ್ಟು, ಕಾಳಿ ಸೇತುವೆಯಂತಹ ಸೂಕ್ಷ್ಮ ಪ್ರದೇಶಗಳಿದ್ದು, ಎಲ್ಲಡೆ ಕಟ್ಟೆಚ್ಚರ ವಹಿಸಲಾಗಿದೆ.
ಸಾಗರ ಕವಚ ಕಾರ್ಯಾಚರಣೆಯಲ್ಲಿ ಆಕಸ್ಮಿಕವಾಗಿ ದುಷ್ಕರ್ಮಿಗಳು ಜಿಲ್ಲೆಯ ಗಡಿ ಪ್ರವೇಶಿಸಿದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಯಿತು. ಸಮುದ್ರ ದಂಡೆ, ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಹಾಗೂ ನಗರ, ಪಟ್ಟಣಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಪೆÇಲೀಸ್ ಕಾವಲು ಬಿಗಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ವಾಹನಗಳನ್ನು ಹಾಗೂ ಅತ್ತಿಂದಿತ್ತ ಪ್ರಯಾಣಿಸುವ ಜನರ ಬ್ಯಾಗ್, ಲಗೇಜ್‍ಗಳನ್ನು ಕುಲಂಕುಶವಾಗಿ ತಪಾಸಣೆ ನಡೆಸಲಾಯಿತು.
ಜಿಲ್ಲೆಯ ಕಾರವಾರದಿಂದ ಭಟ್ಕಳದ ವರೆಗಿನ ಎರಡೂ ಗಡಿಯಲ್ಲಿ ವಾಹನಗಳ ತಪಾಸಣೆ ನಡೆಯಿತು. ಗೋವಾ ಗಡಿಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಹಾದು ಬರುವ ಪ್ರತಿಯೊಂದು ವಾಹನಗಳನ್ನು ಪೆÇಲೀಸರು ಹಾಗೂ ಸಂಚಾರಿ ಪೆÇಲೀಸರು ನಿಲ್ಲಿಸಿ ತಪಾಸಣೆ ನಡೆಸಿದರು. ಸಮುದ್ರ ಮಾರ್ಗದಿಂದ ಯಾವುದೇ ರೀತಿಯ ಅಚಾತುರ್ಯದಿಂದ ದುಷ್ಕರ್ಮಿಗಳು ಒಳ ಪ್ರವೇಶಿಸದಂತೆ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೆÇಲೀಸ್ ಪಡೆಯ ಬೋಟುಗಳು ಗಸ್ತು ತಿರುಗಿದವು.
Leave a Comment