ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ನವೆಂಬರ 25 ರಂದು ಕಾರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಮುಖ್ಯ ಮುಂತ್ರಿಗಳು ಭೇಟಿ ನೀಡುತ್ತಿರುವ ನಿಮಿತ್ತ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸುವರು. ಕುಮಟಾದಲ್ಲಿ ಸಂಜೆ 6.30.ಕ್ಕೆ ಮುಖ್ಯಮುಂತ್ರಿಗಳು ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಭೇಟಿ ನೀಡುತ್ತಿರುವ ನಿಮಿತ್ತ ಶಾಸಕರು ಕುಮುಟಾ ಹಾಗೂ ಭಟ್ಕಳ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸುವರು. ಶಿರಸಿಯಲ್ಲಿ ರಾತ್ರಿ 8.30 ಕ್ಕೆ ಮುಖ್ಯಮುಂತ್ರಿಗಳು ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಭೇಟಿ ನೀಡುವ ನಿಮಿತ್ತ ಶಾಸಕರು, ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸುವರು.
ನವೆಂಬರ 26 ರಂದು ಯಲ್ಲಾಪುರದಲ್ಲಿ ಬೆಳಗ್ಗೆ 9 ಗಂಟೆಗೆ ಮತ್ತು ಹಳಿಯಾಳದಲ್ಲಿ ಬೆಳಗ್ಗೆ 11ಕ್ಕೆ, ಮುಖ್ಯಮುಂತ್ರಿಗಳು ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಭೇಟಿ ನೀಡುತ್ತಿರುವ ನಿಮಿತ್ತ ಶಾಸಕರು ಯಲ್ಲಾಪುರ, ಮುಂಡಗೋಡ ಮತ್ತು ಹಳಿಯಾಳ ಹಾಗೂ ಜೋಯಿಡಾ ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸುವರು
Leave a Comment