ಹಳಿಯಾಳ :- ಹಳಿಯಾಳ ಕ್ಷೇತ್ರದ ಜನರ ಬಹು ವರ್ಷದ ಕನಸು ಹಳಿಯಾಳ-ದಾಂಡೇಲಿ ಕಾಳಿ ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ ದಿ.7 ರಂದು ಹಳಿಯಾಳದಲ್ಲಿ ಶಂಕುಸ್ಥಾಪನೆ ನೇರವೆರಿಸಲಿದ್ದು ಈ ಕಾರ್ಯಕ್ರಮಕ್ಕೆ ರೈತರು ಪಾದಯಾತ್ರೆಯ ಮೂಲಕ, ಸ್ವಯಂ ಪ್ರೇರಣೆಯಿಂದ ಅಭಿಮಾನದಿಂದ ಆಗಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಕರೆ ನೀಡಿದರು. ಪಟ್ಟಣದ ಬಾಬು ಜಗಜ್ಜೀವನರಾಮ ಸಭಾಭವನದಲ್ಲಿ ನಡೆದ ಹಳಿಯಾಳ-ಜೋಯಿಡಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಹಳಿಯಾಳ ತಾಲೂಕಿನ ಕೆರೆ ಹಾಗೂ ಬಾಂದಾರುಗಳಿಗೆ ನೀರು ತುಂಬಿಸುವ ಮೂಲಕ 18 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ 228 ಕೋಟಿ ಬೃಹತ್ ಮೊತ್ತದ ಕಾಳಿ ಏತನೀರಾವರಿ ಯೋಜನೆಯ ಕಾಮಗಾರಿಗೆ ಸಿಎಂ ಅವರು ಚಾಲನೆ ನೀಡಲಿದ್ದಾರೆಂದರು. 20 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾರ್ಯಗತವಾಗಿರುವ ಹಳಿಯಾಳ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ವಿದ್ಯುಕ್ತವಾಗಿ ಉಧ್ಘಾಟನೆ ಮಾಡಲಿದ್ದಾರೆ. ಅಲ್ಲದೇ ಕೊಟ್ಯಂತರ ರೂ. ಅನುದಾನದಲ್ಲಿ ಇತರ ಅನೇಕ ಕಾಮಗಾರಿಗಳ ಉದ್ಘಾಟನೆ ಹಾಗೂ ಕೆಲವು ಕಾಮಗಾರಿಗಳ ಶಂಕುಸ್ಥಾಪನೆ ನಡೆಸಲಿದ್ದಾರೆಂದರು. ಕಾಳಿನದಿ ನೀರಾವರಿ ಯೋಜನೆ ಕಾಮಗಾರಿ ಮಂಜೂರಿ ಮಾಡಿದರೇ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ನನ್ನನ್ನು ಹಾಗೂ ವಿಪ ಸದಸ್ಯ ಘೋಟ್ನೇಕರ ಅವರನ್ನು ಆನೆಯ ಮೇಲೆ ಮೇರವಣಿಗೆ ಮಾಡುವ ಹಾಗೂ ಅವಿರೋಧ ಆಯ್ಕೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದ ಅವರಿಗೆ ಸಚಿವರು ತೀರುಗೆಟು ನೀಡಿ ಯೋಜನೆಯ ಕಾಮಗಾರಿಗೆ ಈಗ ಚಾಲನೆ ದೊರಕುತ್ತಿದ್ದು ಹೇಳಿಕೆ ನೀಡಿದವರು ಏನು ನೀಲುವು ತಾಳಲಿದ್ದಾರೆ ಎಂದು ಪ್ರಶ್ನೀಸಿದ ಅವರು ಬೇಜವಾಬ್ದಾರಿ ಹೇಳಿಕೆಗಳನ್ನು ಯಾವತ್ತು ನೀಡಬಾರದು, ಯಾವತ್ತು ವ್ಯಕ್ತಿಗತ ಟೀಕೆ ಮಾಡಬಾರದು ಎಂದ ದೇಶಪಾಂಡೆ ಆನೆಯ ಮುಂದೆ ಸ್ಪರ್ದೆ ಮಾಡಬೇಡಿ ಎಂದು ಪರೋಕ್ಷವಾಗಿ ಟಿಕಿಸಿದರು. ಸಿಎಂ ಆಗಮನದ ಕಾರ್ಯಕ್ರಮಗಳ ಕುರಿತು ಕಾರ್ಯಕರ್ತರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ ದೇಶಪಾಂಡೆ ಮುಖ್ಯಮಂತ್ರಿಗಳು ಹಳಿಯಾಳಕ್ಕೆ ಆಗಮಿಸುತ್ತಿದ್ದು ರೈತರು, ಕಾರ್ಯಕರ್ತರು, ಸಾರ್ವಜನೀಕರು ಸ್ವಯಂ ಪ್ರೇರಣೆಯಿಂದ, ಅಭಿಮಾನದಿಂದ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರಬೇಕೆಂದು ಪದೆ ಪದೇ ಹೇಳಿದರು. ಸಭೆಯಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾ ಕೊರ್ವೆಕರ, ದಾಂಡೇಲಿ ಅಧ್ಯಕ್ಷ ಸೈಯದ್ ತಂಗಳ, ಜೋಯಿಡಾ ಅಧ್ಯಕ್ಷ ಸದಾನಂದ ದಬಗಾರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ರಮೇಶ ನಾಯ್ಕ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಸದಸ್ಯೆ ಯಾಸ್ಮೀನ ಕಿತ್ತೂರ, ವಕ್ಫ್ ಬೊರ್ಡನ ಜಿಲ್ಲಾಧ್ಯಕ್ಷ ಖಯ್ಯಾಮ ಮುಗದ, ಮುಖಂಡರಾದ ಐಸಿ ಕಾಮಕರ, ಬಿಡಿ ಚೌಗಲೆ, ಶಂಕರ ಬೆಳಗಾಂವಕರ, ಮಾಲಾ ಬೃಗಾಂಜಾ ಇನ್ನಿತರ ಮುಖಂಡರು ವೇದಿಕೆಲ್ಲಿದ್ದರು. ನೂರಾರು ಕಾರ್ಯಕರ್ತರು ಆಗಮಿಸಿದ್ದರು.
Leave a Comment