ಕಾರವಾರ: ಕರಾವಳಿ ಉತ್ಸವದ ನಿಮಿತ್ತ ಕಾರವಾರ ತಾಲೂಕಿನ 18 ವರ್ಷಕ್ಕಿಂತ ಮೇಲ್ಪಟ್ಟಂತಹ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, (ಚುಕ್ಕೆ ರಂಗೋಲಿ), ಚುಕ್ಕೆ ರಹಿತ ರಂಗೋಲಿ (Free Hand ) ಹಾಗೂ ಅಡುಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೇಗೆ ಹೆಸರನ್ನು ನೊಂದಾಯಿಸಿದ ಮಹಿಳೆಯರು ಡಿಸೆಂಬರ 5 ರಂದು ಬೆಳಗ್ಗೆ 10.00 ಗಂಟೆಗೆ ಗುರುಭವನದಲ್ಲಿ ಹಾಜರಾಗುವುದು. ಹಾಗೂ ಅಡುಗೆ ಸ್ಪರ್ಧೆಗೆ ಭಾಗವಹಿಸುವ ಮಹಿಳೆಯರು ಸ್ಥಳದಲ್ಲಿ ಅಡುಗೆ ತಯಾರಿಸಬೇಕಾಗಿರುವುದರಿಂದ ಗ್ಯಾಸ್ ಒಲೆ, ಸಿಲೆಂಡರ್ ಹಾಗೂ ಅಡುಗೆ ಮಾಡಲು ಬೇಕಾಗುವ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತೆಗೆದುಕೊಂಡು ಬರುವುದು. ಶಾಖಾಹಾರಿ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅಣಬೆ ಅಥವಾ ಬಟಾಟೆ ಉಪಯೋಗಿಸಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸುವುದು. ಅಥವಾ ಎರಡು ವಸ್ತುಗಳನ್ನು ಉಪಯೋಗಿಸಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವುದು. ಹಾಗೂ ಮಾಂಸಹಾರಿ ಅಡುಗೆ ಸ್ಪರ್ಧಾಳುಗಳು ಬಂಗಡೆ ಅಥವಾ ಇಸೋಣ ಮೀನುಗಳನ್ನು ಅಥವಾ ಚಿಕನ್ನ್ನು ಉಪಯೋಗಿಸಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಬಹುದು.
ಮಧ್ಯಾಹ್ನ 3.00 ಗಂಟೆಗೆ ನಡೆಯುವ ರಂಗೋಲಿ ಸ್ಪರ್ಧೆಗೆ ಬೇಕಾಗುವ ಸಾಮಗ್ರಿಗಳನ್ನು ಸ್ಪರ್ಧಾಳುಗಳೇ ತೆಗೆದುಕೊಂಡು ಬರುವುದು. ಅದಕ್ಕೆ ಪ್ರತ್ಯೇಕವಾಗಿ ಕರಾವಳಿ ಉತ್ಸವ ಸಮಿತಿಯವರಿಂದ ಯಾವುದೇ ಖರ್ಚು ಭರಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಾಲೂಕಾ ಮಟ್ಟದಲ್ಲಿ ಬಹುಮಾನ ನೀಡಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಹೆಸರನ್ನು ಸಲ್ಲಿಸಲಾಗುವುದು. ಹಾಗೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ತಹಶೀಲ್ದಾರ ಕಛೇರಿ ಕಾರವಾರ ರವರಿಗೆ ದೂರವಾಣಿ ಸಂಖ್ಯೆ 08382- 226331 ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಕಾರವಾರದಲ್ಲಿ 08382-222532 ಕ್ಕೆ ವಿಚಾರಿಸಿ ಮಾಹಿತಿ ಪಡೆಯಬಹುದಾಗಿದೆ.
Leave a Comment