• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಣೆ

December 7, 2017 by Sachin Hegde Leave a Comment

ಹಳಿಯಾಳ: ನೂತನ ತಾಲೂಕು ರಚನೆಯ ಬಗ್ಗೆ ಯಾವುದೇ ವರದಿಗಳಲ್ಲಿಯೂ ಶಿಫಾರಸ್ಸು ಇಲ್ಲದಿದ್ದರೂ ಕೂಡ ಸಚಿವ ಆರ್.ವಿ.ದೇಶಪಾಂಡೆ ಅವರ ಒತ್ತಾಯಪೂರ್ವಕ ಆಗ್ರಹಕ್ಕೆ ಮಣಿದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರವನ್ನು ತಾಲೂಕಾಗಿ ಘೊಷಿಸಲಾಗಿದ್ದು ಜ.1-2018 ನೂತನ ವರ್ಷದಿಂದ ದಾಂಡೇಲಿ ನಗರ ಸ್ವತಂತ್ರ ತಾಲೂಕಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಹಳಿಯಾಳದ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಸರ್ಕಾರಿ ಕಾರ್ಯಕ್ರಮದಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಮಂಜೂರಾದ 517 ಕೋಟಿ ರೂ. ವೆಚ್ಚದ 91  ಕಾಮಗಾರಿಗಳ ಉಧ್ಘಾಟನೆ,ಶಂಕುಸ್ಥಾಪನೆ, ಶಿಲಾನ್ಯಾಸ ಕಾರ್ಯಕ್ರಮ, 221 ಕೋಟಿ ರೂ. ವೆಚ್ಚದ ಕಾಳಿ ಏತ ನೀರಾವರಿ ಯೋಜನೆಗೆ ಅಡಿಗಲ್ಲು, ಪಟ್ಟಣದ 24*7 ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡಿ ವಿವಿಧ ಇಲಾಖೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಚೆಕ್, ಪಟ್ಟಾ, ಪರಿಹಾರ  ಇತರ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.  ಕರ್ನಾಟಕದ ಇತಿಹಾಸದಲ್ಲೇ ಒಂದೆ ಜಿಲ್ಲೆಯಲ್ಲಿ ಇಷ್ಟೊಂದು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಉಧ್ಘಾಟನೆ ಮಾಡಿದ ನಿದರ್ಶನ ಇಲ್ಲ ಎಂದ ಸಿಎಂ ಉಕ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ 3500ಕೋಟಿ ರೂ. ಮೊತ್ತದ 543 ಕಾಮಗಾರಿಗಳ ಉಧ್ಘಾಟನೆ, ಶಿಲಾನ್ಯಾಸ ನೆರವೆರಿಸಿದ್ದು ಐತಿಹಾಸಿಕ ದಾಖಲೆಯಾಗಿದೆ ಎಂದರು. ಮುಖ್ಯಮಂತ್ರಿ ಆಗಿ ತಾವೆ ಇಷ್ಟೊಂದು ಅಭಿವೃದ್ದಿ ಕಾರ್ಯ ಮಾಡಿಲ್ಲ ಆದರೇ ದೇಶಪಾಂಡೆ ಅವರು ಅಭಿವೃದ್ದಿ ಪರ್ವವೇ ಮಾಡಿದ್ದು ರಾಜಕೀಯವಾಗಿ ಅಜಾತಶತ್ರು ಆಗಿರುವ ಆದರ್ಶ ರಾಜಕಾರಣಿ ದೇಶಪಾಂಡೆ ರಾಜಕೀಯದಲ್ಲಿ ಮುಂದುವರೆಯಬೇಕು ಎಂದು ಅವರ ಕಾರ್ಯಗಳನ್ನು ಶ್ಲಾಘಿಸಿ  ಈ ಬಾರಿಯ ಚುನಾವಣೆಯಲ್ಲಿ ದೇಶಪಾಂಡೆ ಗೆಲುವು ಖಚಿತ ಎಂದು ಭವಿಷ್ಯ ನುಡಿದರು.  ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಸಂಸ್ಕಾರ ಇಲ್ಲದ ಕೆನರಾ ಸಂಸದ ಅನಂತಕುಮಾರ ಹೆಗಡೆ ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯ್ಕ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಪರಿವರ್ತನಾ ಯಾತ್ರೆ, ಜೆಡಿಎಸ್‍ನ ಕುಮಾರ ಪರ್ವ, ವಿಕಾಸ ಯಾತ್ರೆ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಟಿಕಾ ಪ್ರಹಾರ ನಡೆಸಿದರು.   ಲೋಕೊಪಯೋಗಿ ಇಲಾಖೆ ಸಚಿವ ಎಮ್.ಸಿಮಹದೇವಪ್ಪಾ ಮಾತನಾಡಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ 161 ಭರವಸೆಗಳಲ್ಲಿ 155 ಅನುಷ್ಠಾನ ಮಾಡಲಾಗಿರುವ ಕೀರ್ತಿ ತಮ್ಮ ಸರ್ಕಾರಕ್ಕಿದೆ ಎಂದ ಅವರು ಟಿಪ್ಪು ಸುಲ್ತಾನ ಬಗ್ಗೆ ಹೊಗಳಿ  ರಾಷ್ಟ್ರಪ್ರೇಮಿ, ಸ್ವತಂತ್ರ ಹೋರಾಟಗಾರ ಟಿಪ್ಪು ಜಯಂತಿ ಆಚರಣೆ  ಬಗ್ಗೆ ಬಿಜೆಪಿಗರು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.  ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಡಿ.6 ಮತ್ತು 7 ರಂದು ನಡೆದ ಕಾಮಗಾರಿಗಳ ಉಧ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು ಗಿನ್ನೆಸ ದಾಖಲೆ ಸೇರಲಿದೆ ಎಂದ ದೇಶಪಾಂಡೆ ನೀರಾವರಿ ಯೋಜನೆ ಮಂಜೂರಿ ಮಾಡಿದ ಸಿಎಂ ಅವರಿಗೆ ಧನ್ಯವಾದ ಸಲ್ಲಿಸಿದರು ಹಾಗೂ  ಹಳಿಯಾಳಕ್ಕೆ 76 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಸಿಎಂ ಅವರು ಮಂಜೂರಿ ನೀಡಿದ್ದಾಗಿ ಹೇಳಿದರು.  ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ವಿರೋಧ ಪಕ್ಷದವರ ವಿರುದ್ದ ಟೀಕಾ ಪ್ರಹಾರ ನಡೆಸಿ ಸಂಸದ ಅನಂತಕುಮಾರ ಹೆಗಡೆ ಪುಕ್ಕಲು ರಾಜಕಾರಣಿ ಎಂದ ಅವರು ಪ್ರಧಾನಿ ಮೋದಿ ವಿರುದ್ದ ಏಕ ವಚನದಲ್ಲಿ ಟೀಕಾ ಪ್ರಹಾರ ನಡೆಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಅಕ್ರಮ ಸಕ್ರಮ ವಿಚಾರದಲ್ಲಿ ಉ.ಕ. ಜಿಲ್ಲಾಧಿಕಾರಿ ವಿರುದ್ದ  ಸಿಎಂ ಸಭೆಯಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು.  ಮರಾಠಾ ಸಮುದಾಯದವರೇ ಸಿಂಹಪಾಲು ಇರುವ ಹಳಿಯಾಳ ಕ್ಷೇತ್ರದಲ್ಲಿ ಮರಾಠರನ್ನು 3ಬಿ ಯಿಂದ ಪ್ರವರ್ಗ 2 ಎಗೆ ಸೇರಿಸುವ ಮೀಸಲಾತಿ ನೀಡುವ ಬಗ್ಗೆ ತಮ್ಮ ಭಾಷಣದುದ್ದಕ್ಕೂ ಚಕಾರ ವೆತ್ತದ ಸಚಿವ ದೇಶಪಾಂಡೆ ಅವರು ಕಾರ್ಯಕ್ರಮದ ಕೊನೆಯಲ್ಲಿ ಈ ಬಗ್ಗೆ ಮಾತನಾಡಿ ಮರಾಠರ ಬೇಡಿಕೆಯನ್ನು ಸಿಎಂ ಗಮನಕ್ಕೆ ತಂದಿರುವುದಾಗಿ ಹೇಳಿದರು.  ಆದರೇ ಸಿಎಂ ಸಿದ್ದರಾಮಯ್ಯ ಅವರು ಮಾತ್ರ  ಮರಾಠಾ ಮೀಸಲಾತಿ ನೀಡುವ ವಿಷಯದ ಬಗ್ಗೆ ಚಕಾರವೆತ್ತದೆ  ಇರುವುದು ಮಾತ್ರ ಮರಾಠಾ ಸಮುದಾಯದಲ್ಲಿ ಬೇಸರ ತರಿಸಿದ್ದಂತು ಸತ್ಯ.  ವೇದಿಕೆಯಲ್ಲಿ ಶಾಸಕರಾದ ಮಂಕಾಳು ವೈದ್ಯ. ಸತೀಶ ಸೈಲ್, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸೇರಿದಂತೆ ಪ್ರಮುಖರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಕ್ರಮ ಸಕ್ರಮ, ಅರಣ್ಯ ಭೂಮಿ, ಅವರ, ಆರ್.ವಿ.ದೇಶಪಾಂಡೆ, ಉತ್ತರ ಕನ್ನಡ ಜಿಲ್ಲೆ, ಒತ್ತಾಯಪೂರ್ವಕ ಆಗ್ರಹಕ್ಕೆ, ಘೊಷಣೆ, ಚೆಕ್‌, ತಾಲೂಕಾಗಿ, ದಾಂಡೇಲಿ ನಗರ, ಪಟ್ಟಾ, ಪರಿಹಾರ  ಇತರ ಪ್ರಮಾಣ ಪತ್ರ, ಮಣಿದು, ರಾಷ್ಟ್ರಪ್ರೇಮಿ, ಶಂಕುಸ್ಥಾಪನೆ, ಶಿಲಾನ್ಯಾಸ, ಸ್ವತಂತ್ರ ಹೋರಾಟಗಾರ ಟಿಪ್ಪು ಜಯಂತಿ ಆಚರಣೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar