ಕಾರವಾರ: ಹೊನ್ನಾವರ ಗಲಬೆ ಪ್ರಕರಣಕ್ಕೆ ಸಂಬಂಧಿಸಿ ವದಂತಿ ಹಬ್ಬಿಸುವವರ ವಿರುದ್ದ ದೂರು ನೀಡುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದ್ದು, ದೂರು ದಾಖಲಿಸಲು ನೀಡಿದ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯೇ ತಪ್ಪಾಗಿದೆ.
ಜಿಲ್ಲಾಡಳಿತ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವವರ ಸ್ಕ್ರೀನ್ ರವಾನಿಸುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ವಾಟ್ಸಪ್ ಸಂಖ್ಯೆ ಅಥವಾ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ಸಂಖ್ಯೆಗೆ ವಾಟ್ಸಪ್ ಮಾಡುವಂತೆ ತಿಳಿಸಲಾಗಿತ್ತು. ಇದರಲ್ಲಿ ಜಿಲ್ಲಾಧಿಕಾರಿ ಕಚೇರಿ ವಾಟ್ಸಪ್ ಸಂಖ್ಯೆ 9483511015 ಆಗಿದ್ದು, ಪೊಲೀಸ್ ಕಂಟ್ರೋಲ್ ರೂಂ ಎಂದು 11 ಅಂಕೆಯ ಮೊಬೈಲ್ ಸಂಖ್ಯೆ ನೀಡಲಾಗಿದೆ. ಮಾದ್ಯಮಗಳಲ್ಲಿಯೂ ಇದೇ ಪ್ರಕಟವಾಗಿದ್ದು, ಸಾಕಷ್ಟು ಜನರಿಗೆ ವಾಟ್ಸಪ್ ಸಂಪರ್ಕ ಸಾದ್ಯವಾಗಿಲ್ಲ.
Leave a Comment