ಕಾರವಾರ: ಕರ್ನಾಟಕ ಲಲಿತಕಲಾ ಅಕಾಡೆಮಿಯು 2017-18ನೇ ಸಾಲಿನ ಕಲಾಸಂಚಾರ ಪ್ರವಾಸಕ್ಕಾಗಿ ಬಿಎಫ್ಎ ಹಾಗೂ ಎಂಫ್ಎ ಪದವೀಧರರಿಗೆ ಹಾಗೂ ವೃತ್ತಿ ನಿರತ ದೃಶ್ಯಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಜನೆವರಿ 6 ಕೊನೆಯ ದಿನವಾಗಿರುತ್ತದೆ. ಆಯ್ಕೆಯಾದ ದೃಶ್ಯಕಲಾವಿದರಿಗೆ 25 ಸಾವಿರ ರೂಪಾಯಿಗಳನ್ನು ಕಲಾಸಂಚಾರ ಪ್ರವಾಸ ಕೈಗೊಂಡ ರೇಖಾಚಿತ್ರ ಹಾಗೂ ಛಾಯಾಚಿತ್ರಗಳನ್ನು ಸಲ್ಲಿಸಿದ ನಂತರ ನೀಡಲಾಗುವುದು.
ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿ ವೆಬ್ ಸೈಟ್ http://lalitkalakarnataka.org/ ಅಥವಾ ಕನಾಟಕ ಲಲಿತ ಕಲಾ ಅಕಾಡೆಮಿ ಕಾರ್ಯಾಲಯ, 2ನೇ ಮಹಡಿ, ಕನ್ನಡ ಭವನ,ಜೆ.ಸಿ.ರಸ್ತೆ,ಬೆಂಗಳೂರು 560002, ದೂರವಾಣಿ ಸಂಖ್ಯೆ 080-22480297 ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment