• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ;ಸಚಿವ ಆರ್.ವಿ.ದೇಶಪಾಂಡೆ

December 17, 2017 by Sachin Hegde Leave a Comment

ಹಳಿಯಾಳ : ರಾಜಕಾರಣಿಗಳು 24 ಗಂಟೆಗಳ ಕಾಲ ರಾಜಕಾರಣ ಮಾಡದೆ ಕಲೆಯ ಆರಾಧನೆಯಲ್ಲಿಯು ತೊಡಗಿಸಿಕೊಳ್ಳಬೇಕು, ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣ ಮಾಡಿ ಹೊರತು ಎಲ್ಲ ಸಮಯದಲ್ಲಿ ಅಲ್ಲ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜೀವನದಲ್ಲಿ ಇತರ ಕಾರ್ಯಕಲಾಪಗಳೊಂದಿಗೆ ಮನೋರಂಜನೆ ಕೂಡ ಮನುಷ್ಯನಿಗೆ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.  ಶನಿವಾರ ಸಾಯಂಕಾಲ ಇಲ್ಲಿಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ  ನಡೆದ ಕರಾವಳಿ ಉತ್ಸವ-2017 ಕಾರ್ಯಕ್ರಮಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವು ಕೂಡ ಹಳಿಯಾಳದಲ್ಲಿ ಕರಾವಳಿ ಉತ್ಸವ ಅದ್ದೂರಿಯಾಗಿ ನಡೆಸಲಾಗುತ್ತಿದ್ದು ಇದರಲ್ಲಿ ಸ್ಥಳೀಯ ಕಲಾವಿದರಿಗೂ ಹೆಚ್ಚಿನ  ಅವಕಾಶ ಮಾಡಿಕೊಡಲಾಗಿದೆ ಎಂದ ಅವರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹನ ನೀಡಲು ಇಂತಹ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.  ಕಾರ್ಯಕ್ರಮವನ್ನು ವಿಕಲಚೇತನ ಕೀಬೊರ್ಡ ವಾದಕ ಗಣೇಶ ಈಶ್ವರ ಭಟ್ ಉಧ್ಘಾಟಿಸಿ ಮಾತನಾಡಿ ಪ್ರತಿಭೆಗಳಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರೋತ್ಸಹಾನ ದೊರೆಯಬೇಕೆಂದರು.  ಖ್ಯಾತ ಚಿತ್ರ ನಿರ್ಮಾಪಕ ಯಶವಂತರಾವ ಸರದೇಶಪಾಂಡೆ ಪ್ರಸ್ತುತ ಪಡಿಸಿದ ರಾಶಿಚಕ್ರ ನಾಟಕದಲ್ಲಿ  ವಿವಿಧ ರಾಶಿಯ ಚಿಹ್ನೆಗಳ ಸಂಕೇತಗಳನ್ನು ತಮ್ಮದೆ ಆದ ಹಾಸ್ಯಪೂರ್ಣ ಮಾದರಿಯಲ್ಲಿ ವಿನೋದವಾಗಿ ಸಾದರಪಡಿಸಿ ಸಾವಿರಾರು ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.  ಇನ್ನೂ ಸಂಗೀತ ಮಾಂತ್ರಿಕ ಕನ್ನಡ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ ಹಾಗೂ ತಂಡದವರು ನೃತ್ಯದೊಂದಿಗೆ ನಡೆಸಿದ ಸಂಗೀತ ರಸಮಂಜರಿ ಕಾರ್ಯಕ್ರಮ ಯುವಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದು ವಿಶೇಷವಾಗಿತ್ತು.   ಸಭಾ ಕಾರ್ಯಕ್ರಮದ ಮೊದಲು ಹಳಿಯಾಳದ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತೀಕ, ಜಾನಪದ ನೃತ್ಯ, ಸಂಗೀತ ಗಾಯನದಂತಹ ಕಾರ್ಯಕ್ರಮಗಳು ನಡೆದವು. 10ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಕರಾವಳಿ ಉತ್ಸವದ ಮನೋರಂಜನೆ ಸವಿದರು.   ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೋಗೇರ, ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಲಕ್ಷ್ಮೀ ಕೊರ್ವೆಕರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ನಾಯ್ಕ, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಅಕ್ರಮ ಸಕ್ರಮ ಸಮೀತಿಯ ಸುಭಾಷ ಕೊರ್ವೆಕರ, ವಕ್ಫ್ ಬೊರ್ಡ ಜಿಲ್ಲಾಧ್ಯಕ್ಷ ಮೊಹಮ್ಮದ ಖಯಾಮ ಮುಗದ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಇತರ ಅಧಿಕಾರಿಗಳು ಇದ್ದರು.    ಸಚಿವ ದೇಶಪಾಂಡೆ ಅವರ ಧರ್ಮಪತ್ನಿ ರಾಧಾ ದೇಶಪಾಂಡೆ, ಪುತ್ರ ಹಾಗೂ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸಚಿವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರನ್ನು ವೇದಿಕೆಯ ಎದುರು ಸನ್ಮಾನಿಸಿ ಸ್ಮರಣಿಕೆ ನೀಡಿದರು.

watermarked 17 hly 6

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಕಾರ್ಯಕಲಾಪಗಳೊಂದಿಗೆ, ಧರ್ಮಪತ್ನಿ ರಾಧಾ ದೇಶಪಾಂಡೆ, ಪುತ್ರ ಹಾಗೂ ಕೆಪಿಸಿಸಿ, ಮನೋರಂಜನೆ ಚುನಾವಣೆ ಸಮಯ, ಮಾತ್ರ, ರಾಜಕಾರಣ ಮಾಡಿ, ಸಚಿವ ಆರ್.ವಿ.ದೇಶಪಾಂಡೆ, ಸಮಯದಲ್ಲಿ ಅಲ್ಲ, ಹೊರತು ಎಲ್ಲ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...