ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲು ಎಸ ಹೂಗಾರ್ ಅವರ ಪತ್ನಿ ವಿಜಯಲಕ್ಷ್ಮೀ ಹೂಗಾರ್ (29) ಪೋಲಿಸ್ ಕ್ವಾಟರ್ಸ್ನಲ್ಲಿಯ ಮನೆಯ ಹಾಲ್ನಲ್ಲಿ ಫ್ಯಾನಿಗೆ ಬೆಡ್ಶಿಟ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ. ಬುಧವಾರ ಬೆಳಿಗ್ಗೆ 8.30ರಿಂದ 9 ಗಂಟೆಯ ಅವಧಿಯಲ್ಲಿ ನಡೆದ ದುರ್ಘಟನೆ. ಗದಗ ಜಿಲ್ಲೆ ಹುಲಕೊಟಿಯವರಾಗಿರುವ ವಿಜಯಲಕ್ಷ್ಮೀ ಕಳೆದ 6 ವರ್ಷಗಳ ಹಿಂದೆ ಪಿಎಸ್ಐ ಮಲ್ಲೂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 5 ವರ್ಷದ ಹಾಗೂ 3 ವರ್ಷದ 2 ಮುದ್ದಾದ ಗಂಡು ಮಕ್ಕಳು ಇವೆ. ರಾತ್ರಿ ಪಾಳಿ ಮುಗಿಸಿ ಬೆಳಿಗ್ಗೆ ಮನೆಗೆ ಬಂದಿದ್ದ ಪಿಎಸ್ಐ ಅವರು ಹಾಗೂ ಮಕ್ಕಳು ಮನೆಯಲ್ಲಿದ್ದಾಗಲೆ ನಡೆದಿರುವ ಘಟನೆ. ಪಿಎಸ್ಐ ಅವರು ಕೂಗುವ ಧ್ವನಿ ಕೇಳಿಸಿ ಪಕ್ಕದಲ್ಲೆ ಮನೆ ಇರುವ ಸಿಪಿಐ ಹೊಳೆನ್ನವರ ಅವರು ಧಾವಿಸಿ ಬಂದಾಗ ಘಟನೆ ಬೆಳಕಿಗೆ ತಕ್ಷಣ ವಿಜಯಲಕ್ಷ್ಮೀಯನ್ನು ನೆಣಿನ ಕುಣಿಕೆಯಿಂದ ಕೆಳಗಿಸಿ ಆಸ್ಪತ್ರೆಗೆ ತಂದ ಪೋಲಿಸರು ವೈದ್ಯರು ಪರಿಕ್ಷಿಸಿದಾಗ ಆಗಲೇ ವಿಜಯಲಕ್ಷ್ಮೀ ಮೃತಪಟ್ಟಿರುವುದಾಗಿ ಘೊಷಣೆ. ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಮಾಜಿ ಶಾಸಕ ಸುನಿಲ್ ಹೆಗಡೆ ಸೇರಿದಂತೆ ಗಣ್ಯರ ಭೆಟಿ ಸಂತಾಪ. ಸ್ಥಳಕ್ಕೆ ಡಿವೈಎಸ್ಪಿ ದಯಾನಂದ ಪವಾರ ಭೇಟಿ ನೀಡಿ ಪರಿಶೀಲಿಸಿದ್ದು ಸ್ಥಳದಲ್ಲೆ ಮುಕ್ಕಾಂ ಹೂಡಿದ್ದಾರೆ.
Leave a Comment