ಹಳಿಯಾಳ:
.ಹಳಿಯಾಳ: ಕೇಂದ್ರ ಬಿಜೆಪಿ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳನ್ನು ಪರಿಗಣಿಸಿ ಜನರು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಬೆಂಬಲ ನೀಡುತ್ತಿದ್ದು ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಬಿಜೆಪಿ ಮುಖಂಡ ಜಿ.ಆರ್.ಪಾಟೀಲ್ ಹೇಳಿದರು. ಮೋದಿಜಿಯವರ ಆಡಳಿತವನ್ನು ಮೆಚ್ಚಿ ತಾವು ಪೋಲಿಸ್ ಇಲಾಖೆಯಿಂದ ನಿವೃತ್ತಿ ಬಳಿಕ ಬಿಜೆಪಿ ಪಕ್ಷ ಸೇರಿದ್ದು ಹಳಿಯಾಳ ಭಾಗದಲ್ಲಿ ಬಿಜೆಪಿ ಪಕ್ಷ ಕಟ್ಟಲು ಕಾರ್ಯಕರ್ತರೊಂದಿಗೆ ಹಗಲು ರಾತ್ರಿ ಶ್ರಮಿಸುತ್ತಿದ್ದು ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಈಗಾಗಲೇ ಹಲವಾರು ಗ್ರಾಮಾಂತರ ಭಾಗದಿಂದ ನೂರಾರು ಕಾರ್ಯಕರ್ತರು ತಮ್ಮ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಂದರು. ತೇರಗಾಂವ ಗ್ರಾಮದಲ್ಲಿ ನಡೆದ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮ ಉಧ್ಘಾಟಿಸಿ ತೇರಗಾಂವ ಹಾಗೂ ಮದ್ನಳ್ಳಿ ಗ್ರಾಮಗಳಿಂದ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಬಂದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಎಸ್.ಕೆ.ಗೌಡಾ, ಪ್ರಕಾಶ ಕಮ್ಮಾರ ಸೇರಿದಂತೆ ಮಾರುತಿ ಬೋಸ್ಲೆ, ಮಹೇಂದ್ರ ಕಮ್ಮಾರ, ನಾರಾಯಣ ಕೆಸರೆಕರ, ಗೊಪಾಲ ಧೂಳಿ, ಮಾರುತಿ ಕೆಳೊಜಿ ಸೆರಿದಂತೆ ಪ್ರಮುಖರು ಇದ್ದರು.
Leave a Comment