ಹಳಿಯಾಳ : ಶಿಕ್ಷಕರು ವ್ಯಕ್ತಿತ್ವ ವಿಕಸನ ಆಧಾರಿತ ಶಿಕ್ಷಣ ನೀಡುವÀತ್ತ ಹೆಚ್ಚು ಗಮನ ಹರಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ತ್ರಿವೇಣಿ ಅನಂತರಾಮ ಕರೆ ನೀಡಿದರು. ಹಳಿಯಾಳದ ವಿ.ಆರ್ ಡಿ ಎಮ್ ಟ್ರಸ್ಟ ಆಶ್ರಯದ ವಿವಿಡಿ ಸ್ಕೂಲ್ ಆಫ್ ಎಕ್ಷಲೆನ್ಸ್ನ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಮಳಗಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ವಿಬಿ ಲಮಾಣಿ ಮಾತನಾಡಿ ವಿವಿಡಿ ಸ್ಕೂಲ್ ಕಳೆದ 12 ವರ್ಷಗಳಲ್ಲಿ ಮಾಡಿದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಪ್ರಾಂಶುಪಾಲ ರೋಷನ್ ಪಿ ಉಪಸ್ಥಿತರಿದ್ದರು. ವಾರ್ಷಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಲೆಯ ವಿವಿಧ ತರಗತಿಗಳ ಮಕ್ಕಳು ಮನ ಸೆಳೆಯುವ ನೃತ್ಯ, ಗೀತ ಹಾಗೂ ರೂಪಕಗಳು ಸಾದರ ಪಡಿಸಿದರು. ಇವುಗಳಲ್ಲಿ ನರ್ಸರಿಯಿಂದ ಪ್ರಾಥಮಿಕ ಹಂತದ ಪುಟಾಣಿಗಳ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಯಿತು.
Leave a Comment