ಹಳಿಯಾಳ: ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೆಳೆ ವೈದ್ಯರು ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವನ್ನಪ್ಪಿದ್ದು ಕೂಡಲೇ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದವರು, ವಿವಿಧ ಸಂಘಟನೆಯವರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೇರವಣಿಗೆ ನಡೆಸಿದ ಮೃತಳ ತಂದೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ. ಮೃತಳ ತಂದೆ ಮಹಮ್ಮದ ಯುಸೂಫ್ ಹುಬ್ಬಳ್ಳಿವಾಲೆ, ಮೃತಳ ಗಂಡ ಗೌಸಮೊದಿನ ಅತ್ತಾರ ಹಾಗೂ ಕುಟುಂಬ ವರ್ಗದವರು ಮುಸ್ಲಿಂ ಸಮಾಜ, ದಲಿತ ಸಂಘರ್ಷ ಸಮೀತಿ, ಮಹಿಳಾ ಸಂಘಟನೆ, ಜಯ ಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮೌನ ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ :- ಪಟ್ಟಣದ ಚವ್ವಾಣ ಪ್ಲಾಟನ ನಿವಾಸಿಗಳಾದ ನಾವು ತೀರಾ ಬಡವರಾಗಿದ್ದು ನನ್ನ ಮಗಳಾದ ಬಿಬಿಆಯೇಷಾ ಗೌಸಮೊದಿನ ಅತ್ತಾರ 2ನೇ ಹೆರಿಗೆಗೆಂದು ದಿ.8 ರಂದು ದಾಖಲಾದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗಳು ನೀರ್ಲಕ್ಷ್ಯತನ ತೊರಿಸಿದ್ದರಿಂದ ತೀವೃ ರಕ್ತಸ್ರಾವವಾಗುತ್ತಿರುವುದನ್ನು ಕಂಡ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗುವಂತೆ ತಿಳಿಸಿದ್ದು ಅಂದು ಕಿಮ್ಸ್ಗೆ ದಾಖಲಾದ ಆಯೇಷಾ ಚಿಕಿತ್ಸೆ ಫಲಿಸದೆ ದಿ.13 ರ ರಂದು ಸಾವನ್ನಪ್ಪಿದ್ದಾಳೆಂದು ವಿವರವಾಗಿ ತಿಳಿಸಿರುವ ಅವರು ಹಳಿಯಾಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನ ಖಂಡಿಸಿ ಮೃತಳ ಶವವನ್ನು ಹಳಿಯಾಳ ಆಸ್ಪತ್ರೆಯ ಎದುರು ಇಟ್ಟುಕೊಂಡು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕರ್ತವ್ಯದಲ್ಲಿದ್ದ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಅವರನ್ನು ಆಗ್ರಹಿಸಿದಾಗ ಅವರು 2 ದಿನಗಳ ಒಳಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದಾಗ ಪ್ರತಿಭಟನೆ ಹಿಂಪಡೆಯಲಾಗಿತ್ತು ಆದರೇ ಈವರೆಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಆರೋಪಿಸಲಾಗಿದೆ. ವೈದ್ಯರ ಹಾಗೂ ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದಲೇ ತಮ್ಮ ಮಗಳು ಸಾವಿಗಿಡಾಗಿದ್ದು ಅವಳಿಗೆ ಜನಿಸಿದ ಗಂಡುಮಗು ಅನಾಥವಾಗಿದ್ದು ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಇನ್ನೂ ಈ ಸರ್ಕಾರಿ ಆಸ್ಪತ್ರೆಯು ಹೆಸರಿಗಷ್ಟೇ ಆಸ್ಪತ್ರೆಯಾಗಿದ್ದು ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲ, ನುರಿತ, ತಜ್ಞ ವೈದ್ಯರ, ಸಿಬ್ಬಂದಿಗಳ ಕೊರತೆ ಇದ್ದು ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳನ್ನೆ ನೆಚ್ಚಿಕೊಂಡಿದ್ದು ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಸಚಿವರು ಮತ್ತು ಸರ್ಕಾರ ಕ್ರಮ ಕೈಗೊಂಡು ಅಮಾಯಕ ಜೀವಗಳು ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆಗ್ರಹಿಸಲಾಗಿದೆ. ಅಲ್ಲದೇ ಒಂದು ವಾರದ ಒಳಗೆ ಸೂಕ್ತ ತನಿಖೆ ನಡೆದು ಕ್ರಮ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದೆ ಇದ್ದಲ್ಲಿ ಊಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಮನವಿಯ ಪ್ರತಿಗಳನ್ನು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಆರೋಗ್ಯ ಸಚಿವ ರಮೇಶಕುಮಾರ, ವಿಪ ಸದಸ್ಯ ಎಸ್.ಎಲ್.ಘೊಟ್ನೆಕರ ಅವರಿಗೂ ರವಾನಿಸಲಾಗಿದೆ. ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಫಯಾಜ ಶೇಖ, ಸುರೇಶ ತಳವಾರ, ಮುಖಂಡರಾದ ಅಲಿಮ, ಅಜರ ಬಸರಿಕಟ್ಟಿ, ಇಮ್ರಾನ ಶೇಖ, ಸಮೀರ ಹುಬ್ಬಳ್ಳಿವಾಲೆ, ಪೀರಾ ಮಕಾನದಾರ, ರಾಜು ಮುಲ್ಲಾ, ಅನ್ನಪ್ಪಾ ವಡ್ಡರ, ಗುಲಾಬಷಾ ಲತಿಫನವರ, ಶಬಾನಾ ದಲಾಲ, ರೇಷ್ಮಾ ಮನಿಯಾರ, ರಿಯಾಜಮ್ಮದ ಇಟ್ಟಂಗಿವಾಲೆ, ಮುಫ್ತಿ ಫಯಾಜಅಮ್ಮದ, ಮಸ್ತಾನ ಮುನವಳ್ಳಿ ಸೇರಿದಂತೆ ಮಹಿಳೆಯರು ಅನೇಕರು ಇದ್ದರು.
Leave a Comment