• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ;ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ

January 16, 2018 by Yogaraj SK Leave a Comment

ಹಳಿಯಾಳ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ,  ಆಸ್ಪತ್ರೆಯ ಎದುರು ಶನಿವಾರ ಶವ ಇಟ್ಟು ಪ್ರತಿಭಟನೆ ಹಾಗೂ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣೀಗೆ, ಪ್ರತಿಭಟನಾಕಾರರ ಆಕ್ರೊಶ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿ ವಿದ್ಯಾಧರ ಗುಳಗುಳಿ ಅವರು ತಹಶೀಲ್ದಾರ್ ಕಚೇರಿಯಲ್ಲಿ ನೊಂದ ಕುಟುಂಬ, ಪ್ರತಿಭಟನಾಕಾರರು ಹಾಗೂ ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ ನಡೆಸಿದರು.    ಸಭೆಯಲ್ಲಿ ಪ್ರತಿಭಟನಾಕಾರರಿಗೆ ಪ್ರಮುಖವಾಗಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ಕುರಿತು ಹೇಳಿಕೆ ದಾಖಲಿಸುವಂತೆ ತಿಳಿಸಿದ ತಹಶೀಲ್ದಾರ್ ಅವರು ಅನೇಕರಿಂದ ಹೇಳಿಕೆ ಪಡೆದುಕೊಂಡರು.   ಸಭೆಯಲ್ಲಿದ್ದ ಬಹುತೇಕರು ಹಳಿಯಾಳ ಸರ್ಕಾರಿ ಆಸ್ಪತ್ರೆಯ ವಿರುದ್ದ ತೀವೃ ಟಿಕಾ ಪ್ರಹಾರ ಹಾಗೂ ಆರೋಪಗಳ ಸುರಿಮಳೆಯನ್ನೆ ಮಾಡಿದರು ಕೆಲವು ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಅಲ್ಲದೇ ಇಲ್ಲಿ ಸಮಪರ್ಕ ಚಿಕಿತ್ಸೆ ನೀಡದೆ ಧಾರವಾಡ, ಹುಬ್ಬಳ್ಳಿ ಮತ್ತು ಬೆಳಗಾವಿಗೆ ಬರೆದುಕೊಡಲಾಗುತ್ತೇ ಸೇರಿದಂತೆ ಹಣದ ಬೇಡಿಕೆ, ಅಂಬ್ಯುಲೆನ್ಸ್ ಇತರ ಸೇವೆಗಳ ಕುರಿತು ವ್ಯಾಪಕ ಆರೋಪಗಳನ್ನು ಮಾಡಿದರು.   ಅಲ್ಲದೇ ಈ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ಜಿಲ್ಲೆಯ 3 ಜನ ತಜ್ಞ ವೈದ್ಯರ ತಂಡ ಪ್ರಾಮಾಣಿಕ ತನಿಖೆ ನಡೆಸುವ ವಿಶ್ವಾಸವಿಲ್ಲ, ಒಂದೆ ಇಲಾಖೆಯವರಾದ್ದರಿಂದ ಪ್ರಕರಣದ ದಿಕ್ಕು ತಪ್ಪಿಸಬಹುದು ಎಂದ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳು ನೇಮಿಸಿರುವ ತಂಡದ ಮೇಲೆ ನಮಗೆ ನಂಬಿಕೆ ಇಲ್ಲ ಆದ್ದರಿಂದ ತಹಶೀಲ್ದಾರ್ ಅವರು ನಮಗೆ ನ್ಯಾಯ ಒದಗಿಸಿಕೊಡುವಂತೆ ಹಾಗೂ ಒಂದು ವಾರದ ಒಳಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.    ಬಾಣಂತಿ ಸಾವು ಪ್ರಕರಣ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ನೊಂದವರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು.  ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಮಾತನಾಡಿ ಹಳಿಯಾಳ ತಾಲೂಕಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ದಾಖಲಾಗಿದ್ದ ಬಿಬಿಆಯಿಷಾ ದಿ.13 ರಂದು ಮರಣಹೊಂದಿದ ಬಗ್ಗೆ ಕುಲಂಕುಷವಾಗಿ ವಿಚಾರಣೆ ನಡೆಸಿ 3 ದಿಗಳ ಒಳಗೆ ವರದಿ ಒಪ್ಪಿಸುವಂತೆ ಜಿಲ್ಲಾ ಆರ್.ಸಿಎಚ್ ಅಧಿಕಾರಿ ಡಾ.ಶರತ ನಾಯಕ, ಸ್ತ್ರೀ ರೋಗ ತಜ್ಞರು ಪಂಡಿತ ಜನರಲ್ ಆಸ್ಪತ್ರೆ ಶಿರಸಿಯ ಡಾ.ವಿನಾಯಕ ಭಟ್ಟ  ಹಾಗೂ ತಾಲೂಕಾ ಆಸ್ಪತ್ರೆ ಸಿದ್ದಾಪುರದ ಫಿಜಿಷಿಯನ್ ಡಾ.ಪ್ರಕಾಶ ಪುರಾಣಿಕ ಅವರನ್ನೊಳಗೊಂಡ 3 ಜನರ ತಂಡ ರಚಿಸಿ ದಿ.16 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶೋಕಕುಮಾರ ಅವರು ಆದೇಶ ಹೊರಡಿಸಿದ್ದಾರೆಂದು ತಿಳಿಸಿದ ಅವರು ಪ್ರಕರಣದ ತನಿಖೆ ನಡೆಯುವವರೆಗೆ ಸಹಕರಿಸುವಂತೆ ಮನವಿ ಮಾಡಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಂಬ್ಯುಲೆನ್ಸ್, ಆರೋಪ, ನೀರ್ಲಕ್ಷ್ಯತನದಿಂದ, ಬಾಣಂತಿ ಸಾವು, ಮಹತ್ವಪೂರ್ಣ ಸಭೆ, ವೈದ್ಯರ, ವೈದ್ಯಾಧಿಕಾರಿಗಳೊಂದಿಗೆ, ಸರ್ಕಾರಿ ಆಸ್ಪತ್ರೆ, ಸಿಬ್ಬಂದಿಗಳ, ಹಣದ ಬೇಡಿಕೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar