ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಕುರ್ವಾ ನೇತಾಜಿ ಯುವಕ ಸಂಘ ನೇತೃತ್ವದಲ್ಲಿ ಸುಭಾಷಚಂದ್ರ ಬೋಸ್‍ರವರ 121ನೇ ಜನ್ಮ ದಿನಾಚರಣೆ ಪ್ರಯುಕ್ತ ಜ. 23 ಮಂಗಳವಾರ ಶ್ರಮದಾನದ ಮೂಲಕ ಕರಿಕುರ್ವಾ ಭಾಗದ ಸುತ್ತಮುತ್ತಲಿನ ಶರಾವತಿ ನದಿಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮನಾಥ ಅರ್. ಭಟ್ಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment