• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರೇಶ ಸಾವಿನ ತನಿಖೆಯ ಬಗ್ಗೆ ಉಗ್ರ ಪ್ರತಿಭಟನೆ

January 31, 2018 by Gaju Gokarna Leave a Comment

ಹೊನ್ನಾವರ:

ತಾಲೂಕಿನ ಹಿಂದು ಯುವಕ ಪರೇಶ ಮೇಸ್ತರವರ ಸಾವಿಗೆ ಸಂಭದಿಸಿದಂತೆ ಸರಕಾರವು ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದು ಹಾಗೂ ಪರೇಶ ಮೇಸ್ತನ ಹತ್ಯೆ ಪ್ರಕರಣಕ್ಕೆ ಸಂಭಂದಿಸಿ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸದೇ ಇರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪೋಲಿಸ ಇಲಾಖೆಯ ವಿರುದ್ದ ತಾಲೂಕಿನ ಸಾವಿರಾರು ಮಹಿಳೆಯರು ಪಟ್ಟಣದಲ್ಲಿ ಉಗ್ರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪರೇಶ ಮೇಸ್ತರವರ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಸರಕಾರಿ ನೌಕರ ಕೊಡುವ ಭರವಸೆ ಇನ್ನೂ ಈಡೇರಿಸದೇ ಇರುವ ಬಗ್ಗೆ, ಕಳೆದ ಡಿಸೆಂಬರ 6 ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹಿಂದು ಯುವಕ ಅಮಾಯಕ ಪರೇಶ ಮೇಸ್ತರವರ ಸಾವು ಸಂಭವಿಸಿ ಈಗಾಗಲೇ 55 ದಿನ ಕಳೆದಿದೆ. ಅವರ ಕುಟುಂಬಕ್ಕೆ ಕೇವಲ ಜಿಲ್ಲಾಧಿಕಾರಿಗಳ ವತಿಯಿಂದ ಮಾತ್ರ ಪರಿಹಾರ ಸಂದಾಯವಾಗಿದ್ದು ಸರಕಾರದ ವತಿಯಿಂದ ಯಾವುದೇ ಪರಿಹಾರ ಬಂದಿರುವುದಿಲ್ಲಾ. ಪಟ್ಟಣದ ದುರ್ಗಾಕೇರಿ ದಂಡಿನದುರ್ಗಾ ದೇವಸ್ಥಾನದಿಂದ ಪಟ್ಟಣದ ಬಜಾರ ರಸ್ತೆ, ಮಾಸ್ತಿ ಕಟ್ಟೆ ಮೂಲಕ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ಪೋಲಿಸ ಠಾಣೆಗೆ ತೆರಳಿ ಪರೇಶ ಮೇಸ್ತರವರ ಕೊಲೆಗೆ ಸಂಭಂದಪಟ್ಟಂತೆ 4 ಮಂದಿ ಆರೋಪಿಗಳಾದ ಆಸೀಪ ರಫೀಕ, ಮಹಮ್ಮದ್ ಫೈಸಲ್, ಅಣ್ಣಿಗೇರಿ ಇಮ್ತಿಯಾಜ, ಗನಿ ಮತ್ತು ಸಲಿಂ ಜಿಮ್ ಮಾಲಿಕ ಈ ವರೆಗೂ ಪರಾರಿಯಾಗಿದ್ದು ಪೋಲಿಸಿ ಇಲಾಖೆಯವರು ಇವರನ್ನು ಬಂಧಿಸುವ ಪ್ರಯತ್ನ ಮಾಡುತ್ತಿಲ್ಲ. ತಾವು ಈ ಬಗ್ಗೆ ಸಂಭಂದ ಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಆರೋಪಿತರನ್ನು ತಕ್ಷಣ ಬಂಧಿಸಿ ಉಗ್ರ ಶಿಕ್ಷೆ
ವಿಧಿಸಬೇಕು ಎಂದು ಪೋಲಿಸ ಮಹಾನಿರ್ದೇಶಕರಿಗೆ ಡಿವೈಎಸ್‍ಪಿ ಶಿವಕುಮಾರ್ ಅವರ ಮೂಲಕ ಮನವಿ ಸಲ್ಲಿಸಿದರು.

ಪರೇಶ ಮೇಸ್ತರವರ ಕುಟುಂಬದವರ ಆರ್ಥಿಕ ಪರಿಸ್ಥಿತಿ ತೀರಾ ಕಷ್ಟದಾಯಕವಾಗಿದೆ. ದುಡಿಯುವ ಮಗನನ್ನು ಕಳೆದುಕೊಂಡು ಅವರ ಕುಟುಂಬದವರು ಕಂಗಲಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ ತಕ್ಷಣ ರೂ.25 ಲಕ್ಷ ಪರಿಹಾರವನ್ನು ನೀಡಬೇಕು. ಅನುಕಂಪದ ಆಧಾರದ ಸರಕಾರಿ ನೌಕರಿ ನೀಡಲು ನಿರ್ದೇಶಿಸಬೇಕು ಎಂದು ಸಮಸ್ತ ಹಿಂದೂ ಸಮಾಜದ ಮಾತೃಶಕ್ತಿಯವರು ಪಟ್ಟಣದಲ್ಲಿ ಬೃಹತ್ ಮೆರವಣಿಗೆಗೆ ನಡೆಸಿದರು.
ಪರೇಶ ಮೇಸ್ತರವರ ಸಾವಿಗೆ ಸಂಬಂಧಪಟ್ಟಂತೆ ನೈಜ ಆರೋಪಿಗಳ ಬಂಧನ ಕುರಿತು ನಿರ್ಲಕ್ಷ ಹಾಗೂ ಹೊನ್ನಾವರದಲ್ಲಿ ಅವ್ಯಾಡತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕುರಿತು ಹೊನ್ನಾವರದಲ್ಲಿ ಗಲಭೆ ನಡೆದು ಈಗಾಗಲೇ 55 ದಿನಗಳು ಕಳೆದಿವೆ. ಗಲಭೆಯಲ್ಲಿ ಅಮಾಯಕ ಹಿಂದೂ ಯುವಕ ಪರೇಶ ಮೇಸ್ತರವರ ಸಾವಿಗೆ ಸಂಬಂಧಿಸಿದಂತೆ ದೂರುನನ್ವಯ 5 ಜನ ಆರೋಪಿಗಳ ಮೇಲೆ ಐ.ಪಿ.ಸಿ ಸೆಕ್ಷನ್ 302 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಕೇವಲ ಒಬ್ಬ ಆರೋಪಿ ಮಾತ್ರ ಬಂಧಿತನಾಗಿದ್ದು ಉಳಿದ 4 ಆರೋಪಿಗಳ ಬಂಧನಕ್ಕೆ ಪೋಲಿಸ ಇಲಾಖೆಯಿಂದ ಯಾವುದೇ ಗಂಭೀüರ ಪ್ರಯತ್ನ ನಡೆಯುತ್ತಿರುವುದು ಕಂಡು ಬರುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ವಿಚಾರಿಸಲಾಗಿ ಪ್ರಕರಣವನ್ನು ಸರಕಾರದವರು ಸಿ.ಬಿ.ಐ ಗೆ ವಹಿಸಿಕೊಟ್ಟಿರುತ್ತಾರೆ ಎಂಬ ಸಿದ್ದ ಉತ್ತರ ನೀಡಲಾಗುತ್ತದೆ. ಆಡಳಿತ ವರ್ಗದವರು ನಿಷ್ಕಾಳಜಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿ ಸಂದೇಹ ಪಡುವಂತಾಗಿದೆ.

ಮುಖ್ಯಮಂತ್ರಿಗಳು ಕೋಮು ಗಲಭೆಗೆ ಪ್ರಚೋದನೆ ನೀಡುವಂತ ವಾಟ್ಸಪ್ ಮತ್ತು ಫೇಸಬುಕ್ ಸಂದೇಶವನ್ನು ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ದ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಗಡಿಪಾರು ಮಾಡುವಂತ ಕಠಿಣ ಕ್ರಮ ಕೈಗೊಳ್ಳುವ ನಿರ್ದೇಶನವನ್ನು ಪೋಲಿಸ ಇಲಾಖೆಗೆ ನೀಡಿದ್ದರು. ಪ.ಪಂ ಮಾಜಿ ಅಧ್ಯಕ್ಷೆ ಜೈನಾಭಿ ಸಾಬ್ ಪ್ರಚೋದನಾತ್ಮಕ ಸಂದೇಶವನ್ನು ನೀಡಿರುವ ಬಗ್ಗೆ ದಾಖಲೆ ಸಹಿತವಾಗಿ ದೂರುನೀಡಿದ್ದರು. ಈ ತನಕ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸಮಸ್ತ ಹಿಂದೂ ಮಾತೃಶಕ್ತಿಯವರು ತಮಗೆ ಸಲ್ಲಿಸುವ ಮನವಿ ಎಂದರೆ ಕುಕೃತ್ಯವೆಸೆಗಿದ ಎಲ್ಲ ಅಪರಾಧಿಗಳನ್ನು ತಕ್ಷಣ ಬಂಧಿಸಿ ಇದನ್ನು ಬಿಟ್ಟು ಮಾತೃ ಶಕ್ತಿಯನ್ನು ಎಂದಿಗೂ ಕಡೆಗಣಿಸದಿರಿ ಎಂದು ಸೇರಿದ ಮಹಿಳೆಯರು ಎಚ್ಚರಿಸಿದರು.

ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಕೊಲೆ ಆರೋಪಿಗಳನ್ನು ಇನ್ನು ಬಂಧಿಸಿಲ್ಲ, ತನಿಖೆ ಸಹ ಸರಿಯಾಗಿ ನಡೆಯುತ್ತಿಲ್ಲಾ. ಪೋಲಿಸರೇ ತಮ್ಮ ಮೇಲೆ ಸರ್ಕಾರದ ಒತ್ತಡ ಇರಬಹುದು, ಸ್ವಲ್ಪ ಆಲೋಚನೆ ಮಾಡಿ ಈ ಪರಿಸ್ಥಿತಿ ನಿಮ್ಮ ಮಕ್ಕಳಿಗೂ ಬರಬಹುದು. ಸ್ವಲ್ಪ ಖಾಕಿ ಬಟ್ಟೆ ತೆಗೆದು ಪಕ್ಕಕಿಟ್ಟು ತಾವು ಆಲೋಚಿಸಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಲ್ಲಿ ಪಿಎಫ್‍ಐ, ಕೆಎಫ್‍ಡಿ ಸಂಘಟನೆಯ ಮೇಲೆ ಇರುವ ಕೇಸ್ ವಾಪಸ್ ಪಡೆದಿರುವುದೇ ಹಿಂದೂಗಳ ಮೇಲೆ ಇಂತಹ ಪ್ರಕರಣ ಸಂಭವಿಸಿದೆ. ಸ್ಥಳಿಯ ಇಬ್ಬರು ಶಾಸಕರು ಹೆತ್ತತಾಯಿಯ ಕರುಳಿನ ನೋವು ಸಂಕಟವನ್ನು ಅರ್ಥಮಾಡಿಕೊಂಡಿಲ್ಲ. ಈ ಶಾಸಕರು ಅನ್ಯಾಯಕ್ಕೆ ಸಾಥ್ ಕೊಟ್ಟಿದ್ದು, ಮುಂದಿನ ದಿನದಲ್ಲಿ ತಮ್ಮವರ ಹೆಣಗಳು ಉರುಳಿದಾಗ ಅರ್ಥವಾಗುತ್ತದೆ. ನ್ಯಾಯಾಂಗ, ಕಾರ್ಯಾಂಗ ಸರಿಯಾಗಿ ಕೆಲಸ ಮಾಡಬೇಕು, ಇನ್ನುಳಿದ ನಾಲ್ವರು ಆರೋಪಿಗಳು ಇನ್ನೇಷ್ಟೋ ಅಮಾಯಕ ಹಿಂದೂಗಳ ಬಲಿ ತೆಗೆದುಕೊಳ್ಳಬೇಕಾದಿಯೋ? 8 ದಿನಗಳ ಒಳಗೆ ಈ ನಾಲ್ಚರು ಆರೋಪಿಗಳನ್ನು ಬಂಧಿಸದೆ ಇದ್ದಲ್ಲಿ ಮಹಿಳೆಯರ ತಾಕತ್ತು ಏನು ಎಂಬುವುದನ್ನು ತೋರಿಸಿ ಕೊಡಬೇಕಾಗುತ್ತದೆ. ಪೋಲಿಸ ಇಲಾಖೆಯ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಅಮಾಯಕರು ಜೈಲಿನಲ್ಲಿ ಅಪರಾಧಿಗಳು ಊರಿನಲ್ಲಿ ಎಂದು ಪೋಲಿಸ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಶ್ರೀ ದುರ್ಗಾದೇವಿ ಮಹಿಳಾ ವಾಹಿನಿಯ ರುಕ್ಮಿಣಿ ಕಮಲಾಕರ ಮೇಸ್ತ, ಭಾಗ್ಯ ಲೋಕೇಶ ಮೇಸ್ತ, ನಾಗರತ್ನ ಮೇಸ್ತ, ಗೌರಿ ಮೇಸ್ತ, ಶೈಲಾ ಮೇಸ್ತ, ನಮಿತಾ ಕಾಮತ್, ಅನುಪಮಾ ಮಡಿವಾಳ, ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ, ಸುನಿಲ್ ನಾಯ್ಕ ಭಟ್ಕಳ, ನಾಗರಾಜ ನಾಯಕ ತೊರ್ಕೆ, ಸುಬ್ರಾಯ ನಾಯ್ಕ, ಮುರಳಿಧರ್ ಗಾಯ್ತೊಂಡೆ, ಹಿಂದೂ ಪರ ಸಂಘಟನೆಯ ಶಿವರಾಜ ಮೇಸ್ತ, ಉಮೇಶ ಮೇಸ್ತ, ಲೋಕೇಶ ಮೇಸ್ತ, ಉಮೇಶ ಸಾರಂಗ, ಉಮೇಶ ಕಾಮತ್, ಸಂಜು ಶೇಟ್, ಮಹೇಶ ನಾಯ್ಕ, ಬಾಲಕೃಷ್ಣ ಬಾಳೇರಿ, ವಿನಾಯಕ ಆಚಾರಿ, ವಿಜು ಕಾಮತ್, ವೀರೇಂದ್ರ ಮೇಸ್ತ, ಗಣೇಶ ಪೈ, ಉಲ್ಲಾಸ ಶಾನಭಾಗ್, ರಾಜು ಭಂಡಾರಿ ಇತರರು ಉಪಸ್ಥಿತರಿದ್ದರು. ಮನವಿಯನ್ನು ತಹಸಿಲ್ದಾರ್ ವಿ.ಆರ್.ಗೌಡ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಡಿವೈಎಸ್‍ಪಿ ಶಿವಕುಮಾರ, ಪಿಎಸೈ ಆನಂದಮುರ್ತಿ, ಸಿಪಿಐ ಚೆಲುವರಾಜ್, ಪಿಎಸೈ ನಿತ್ತುಗೋಡಿ, ಪಿಎಸೈ ಗಣೇಶ ಜೊಗಳೆಕರ್ ನೂರಾರು ಪೋಲಿಸ ಅಧಿಕಾರಿಗಳು ಪಟ್ಟಣದಲ್ಲಿ ಬಂದೋಬಸ್ತ ಕೈಗೊಂಡಿದ್ದರು.

——————————————————————————————————————————–
ಹಿಂದು ಮುಖಂಡೆ ಚೈತ್ರಾ ಕುಂದಾಪುರ ಮಾತನಾಡಿ ಪರೇಶನ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಪರೇಶ ಮೇಸ್ತ ಸತ್ತಾಗ ಜಿಲ್ಲೆಯಲ್ಲಿ 56 ಶಿಲಾನ್ಯಾಸ ಕಾರ್ಯಕ್ರಮ ಮಾಡಿದ್ದಾರೆ. ಅದು ಸಹ ಪರೇಶನ ಹೆಣದ ಮೇಲೆಯೇ ನೇರವೇರಿಸಿದ್ದಾರೆ. ಶಾಸಕ ಮಂಕಾಳ ವೈದ್ಯ ಭಟ್ಕಳಕ್ಕೂ ಭಯೋತ್ಪದಕರಿಗೂ ಯಾವುದೇ ನಂಟಿಲ್ಲಾ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುತ್ತಾರೆ. ಇದು ಯಾವುದೇ ಸಂಘ ಪರಿವಾರ ರಾಜಕೀಯ ಪಕ್ಷ ನೀಡಿರುವ ಹೇಳಿಕೆ ಅಲ್ಲ. ಭಟ್ಕಳದಲ್ಲಿ 1993 ರ ಮುಂಚಿತವಾಗಿ ಭಯೋತ್ಪಾದಕರೂ ಇದ್ದಾರೆ ಎನ್ನುವುದನ್ನು ಜಗನ್ನಾಥ ಶೆಟ್ಟಿ ಆಯೋಗ ಹೇಳಿಕೊಂಡಿದೆ. ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಎನ್‍ಐಎ ಸಹ ಭಟ್ಕಳದಲ್ಲಿ ಭಯೋತ್ಪಾದಕರಿದ್ದಾರೆ ಎಂದು ಘೋಷಿಸಿದೆ. ಅದಲ್ಲದೆ ಅಮೇರಿಕಾದಲ್ಲಿ ಏನಾದರೂ ಸಹ ಭಯೋತ್ಪಾದಕ ಕೃತ್ಯ ನಡೆದರೂ ಅವರು ದೇಶದ ಭಟ್ಕಳದ ಮೇಲೆ ಕಣ್ಣಿಟ್ಟು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಿಯ ಶಾಸಕ ವೈದ್ಯ ಈ ಬಗ್ಗೆ ಬೇಜಾವಾಬ್ದಾರಿ ವ್ಯಕ್ತಿ ಎಂದು ಗೊಚರಿಸುತ್ತದೆ. ಅವರನ್ನು ಆಯ್ಕೆ ಮಾಡಿದ ನಾವು ಈಗ ಈ ಕಷ್ಟ ಅನುಭವಿಸಬೇಕು. ದೇಶದ ಅನೇಕ ಭಯೋತ್ಪಾದಕ ಕೃತ್ಯ ನಡೆಸಿರುವ ರಿಯಾಜ್ ಭಟ್ಕಳ, ಯಾಸಿನ್ ಭಟ್ಕಳ, ಇಡೀ ದೇಶಕ್ಕೆ ಗೊತ್ತು. ನಮ್ಮ ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮಾಹಿತಿ ಇಲ್ಲಾ, ಇದು ನಮ್ಮ ದುರ್ದೈವ. ತನ್ನ ಕ್ಷೇತ್ರದ ಜನರನ್ನು ಯಾಮಾರಿಸುತ್ತಿರುವ ಶಾಸಕ ವೈದ್ಯರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿಕೊಡುವುದು ನಿಶ್ಚಿತ. ಮತ ಕೇಳಲು ಬಂದಾಗ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

paresh mesta

 

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: 1993 ರ ಮುಂಚಿತವಾಗಿ, 56 ಶಿಲಾನ್ಯಾಸ ಕಾರ್ಯಕ್ರಮ, ಅಡಿಯಲ್ಲಿ, ಉಗ್ರ ಪ್ರತಿಭಟನೆ, ಉಗ್ರ ಶಿಕ್ಷೆ, ಉಪವಾಸ ಸತ್ಯಾಗ್ರಹ, ಕಾರಣ, ಕುಂದಾಪುರ, ಕೊಲೆ ಆರೋಪಿ, ಕೋಮು, ಗಡಿಪಾರು, ಗಲಭೆಗೆ ಪ್ರಚೋದನೆ, ಗೂಂಡಾ ಕಾಯ್ದೆ, ಚೈತ್ರಾ, ಜಗನ್ನಾಥ ಶೆಟ್ಟಿ, ತನಿಖೆ, ದುರ್ಗಾದೇವಿ ಮಹಿಳಾ ವಾಹಿನಿ, ನೀಡುವಂತ ವಾಟ್ಸಪ್, ಪರೇಶ ಸಾವಿನ, ಪರೇಶನ ಸಾವಿಗೆ, ಫೇಸಬುಕ್, ಬಗ್ಗೆ, ಬಂಧಿಸಿ, ಭಯೋತ್ಪಾದಕರೂ, ಮಾಡುವಂತ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ರಾಜ್ಯಪಾಲರಿಗೆ ಮನವಿ, ರುಕ್ಮಿಣಿ ಕಮಲಾಕರ ಮೇಸ್ತ, ಶ್ರೀಕಲಾ ಶಾಸ್ತ್ರಿ ಮಾತನಾಡಿ ಕೊಲೆ ಆರೋಪಿ, ಸಂದೇಶವನ್ನು ಜಾಲತಾಣಗಳಲ್ಲಿ, ಹರಿಬಿಟ್ಟವರ ವಿರುದ್ದ, ಹಿಂದು ಮುಖಂಡೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...