Éೂನ್ನಾವರ:
ಬೇರಂಕಿಯ ಶ್ರೀ ಮಹಾಸತಿ ದೇವಾಲಯದ 6ನೇ ವರ್ಷದ ವರ್ಧಂತಿ ಉತ್ಸವ ಫೆಬ್ರವರಿ 7 ಮತ್ತು 8 ರಂದು ನಡೆಯಲಿದೆ.
ಫೆ. 7 ರಂದು ಬೆಳಿಗ್ಗೆ ಪ್ರಾರ್ಥನೆ, ಪಂಚಗವ್ಯ ಹೋಮ, ಪುಣ್ಯಾಹ, ಪ್ರಧಾನ ಸಂಕಲ್ಪ, ಪಾರಾಯಣ, ರಾತ್ರಿ ರಂಗಪೂಜೆ, ದಂಡಬಲಿ, ಬ್ರಹ್ಮಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಫೆ. 8 ರಂದು ಅಧಿವಾಸ, ತತ್ವಹೋಮಗಳು, ಬ್ರಹ್ಮ ಕಲಶಾಭಿಶೇಕ, ಮಹಾ ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ಯಕ್ಷಗಾನ ಸಂಘ ಬಳಕೂರು ಹಾಗೂ ಅತಿಥಿ ಕಲಾವಿದರಿಂದ `ಮಾರುತಿ ಪ್ರತಾಪ’ ಹಾಗೂ `ಭೂ ಕೈಲಾಸ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಸಿದ್ದಾರೆ.
Leave a Comment