ಹಳಿಯಾಳ: ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಹಾಗೂ ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ (ಉತ್ಕರ್ಷ)ರವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್, ಬೆಂಗಳೂರು ಮತ್ತು ಹಳಿಯಾಳ ತಾಲೂಕಾ ಘಟಕದಿಂದ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ನಾಸಿಕ ಆರ್ಮಿ ಪ್ರಥಮ ಬಹುಮಾನ. ರೂ1.50 ಲಕ್ಷ ರೂ. ನಗದು ಮತ್ತು ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ. ಶೀವಾಜಿ ಕ್ರೀಡಾಂಗಣದಲ್ಲಿ ಹಾಕಲಾದ ಭವ್ಯ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ದೇಶದ ಗ್ರಾಮೀಣ ಹಾಗೂ ಪ್ರಾಚೀನ ಕ್ರೀಡೆಗಳಲ್ಲಿ ಒಂದಾದ ಕಬ್ಬಡ್ಡಿ ಪಂದ್ಯ ನಶಿಸುವ ಹಂತಕ್ಕೆ ತಲುಪಿತ್ತು ಇಂದು ಈ ಕ್ರೀಡೆಗೆ ಮತ್ತೇ ಮರುಜೀವ ಬಂದಂತಾಗಿದ್ದು ರಾಜ್ಯ ಅಮೇಚುರ್ ಕಬ್ಬಡ್ಡಿ ಅಸೋಶಿಯೇಶನ್ ರವರು ಎಲ್ಲೆಡೆ ಕಬ್ಬಡ್ಡಿ ಕ್ರೀಡೆ ಬಗ್ಗೆ ಯುವಕರಲ್ಲಿ ಇನ್ನೂ ಆಸಕ್ತಿ ಬರುವಂತೆ ಹಾಗೂ ಇನ್ನಿತರ ಗ್ರಾಮೀಣ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು, ಕ್ರೀಡಾಪಟು ಯುವಕರು ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವಂತೆ ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ, ಕಾಶೀಯ ಗಾನಯೋಗಿ ಮಂಜುನಾಥ ಮಹಾರಾಜ, ಯೂ ಮುಂಬಾ ತಂಡದ ಕೋಚ್ ರವಿ ಶೆಟ್ಟಿ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ, ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಹಳಿಯಾಳ ತಾಲೂಕಾ ಘಟಕದ ಅಧ್ಯಕ್ಷ ಶ್ರೀನಿವಾಸ ಎಸ್ ಘೋಟ್ನೆಕರ, ಉಪಾಧ್ಯಕ್ಷ ಸುಭಾಸ ಕಾಮ್ರೆಕರ, ಸಂಜು ಅಸೂಕರ, ಶಂಕರ ದೇಸೂರಕರ, ಕಾರ್ಯದರ್ಶಿ ದಿನೇಶ ನಾಯ್ಕ, ಅನೀಲ ಚವ್ಹಾನ, ಮಂಗಲಾ ಕಶೀಲ್ಕರ, ಉಮೇಶ ಬೋಳಶೆಟ್ಟಿ, ಸುರೇಶ ತಳವಾರ ಇನ್ನಿತರರು ಇದ್ದರು. ಇದೇ ಪ್ರಥಮ ಬಾರಿಗೆ ಹಳಿಯಾಳದಲ್ಲಿ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು ಮ್ಯಾಟ್ ಮೇಲೆ ಪಂದ್ಯಗಳು ನಡೆದವು. ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪುಣೆ, ಕರ್ನಾಟಕ, ಗೋವಾ, ಉತ್ತರಕನ್ನಡದ ಎರಡು ಅತ್ಯತ್ತಮ ತಂಡಗಳು ಮತ್ತು ಇತರೆ ರಾಜ್ಯಗಳ ಕ್ಲಬ್ ತಂಡಗಳು ಭಾಗವಹಿಸಿದ್ದು ಹಾಗೂ 20 ನಿರ್ಣಾಯಕರುಗಳು ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು. -:ವಿಜೇತರು :-
ಮಹಾರಾಷ್ಟ್ರ ಪೋಲಿಸ್ ತಂಡ ದ್ವಿತೀಯ ಬಹುಮಾನ 1 ಲಕ್ಷ ಮತ್ತು ಟ್ರೋಪಿ ಪಡೆದರೇ ತೃತೀಯ ಬಹುಮಾನ 65 ಸಾವಿರ ರೂ, ಆಳ್ವಾಸ್ ಮೂಡಬಿದ್ರೆ ಮತ್ತು ಚತುರ್ಥ 65 ಸಾವಿರ ರೂ ನಗದು ಕಸ್ಟಮ್ಸ್ ಬೆಂಗಳೂರು ನಗದು ಹಾಗೂ ಟ್ರೊಪಿಯನ್ನೂ ಪಡೆದರು. ಇನ್ನೂ ವೈಯಕ್ತಿಕ ಬಹುಮಾನಗಳನ್ನು ತಲಾ ರೂ 10 ಸಾವಿರದಂತೆ ಬೆಸ್ಟ ರೈಡರ್ ವಿಕ್ರಾಂತ್ ಆಳ್ವಾಸ್ ಮೂಡಬಿದ್ರೆ, ಬೆಸ್ಟ್ ಕ್ಯಾಚರ್ ರೋಹಿತ್ ಭಾರೆ,(ಮಹಾರಾಷ್ಟ್ರ ಪೋಲಿಸ್ ಮತ್ತು ಬೆಸ್ಟ ಆಲ್ ರೌಂಡರ್ ಪ್ರಭಂಜನ್ (ಕಸ್ಟಮ್ಸ್ ಬೆಂಗಳೂರ) ಬಾಚಿಕೊಂಡರು. ವಿಶೆಷವಾಗಿ ತಂಡಗಳಲ್ಲಿ ಪ್ರೋ ಕಬಡ್ಡಿ ಆಡಿದ ಆಟಗಾರರು ಭಾಗವಹಿಸಿದ್ದರು ಹಾಗೂ ಹೊನಲು ಬೆಳಕಿನಲ್ಲಿ ನಡೆದ ಮ್ಯಾಟ್ ಮೇಲಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಸುಮಾರು 5 ಸಾವಿರಕ್ಕೂ ಅಧಿಕ ಅಭಿಮಾನಿಗಳು ವೀಕ್ಷಿಸಿದರು.
Leave a Comment