ಹಳಿಯಾಳ:- ಗೌಳಿ ಸಮುದಾಯಗಳ ವಸತಿ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಗೌಳಿ ಜನರನ್ನು ಅಲೆಮಾರಿ ಜನರನ್ನಾಗಿ ಸೇರ್ಪಡೆಗೊಳಿಸಿ ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ರಾಜ್ಯ ಸರ್ಕಾರ ಮಂಜೂರಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಮಾಧ್ಯಮಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರ ಎಲ್ಲ ವರ್ಗಗಳ, ಹಿಂದೂಳಿದವರ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದೆ ಅದಕ್ಕಾಗಿ ಕೊಟ್ಯಂತರ ರೂ ಅನುದಾನ ಮಂಜೂರಿ ಮಾಡುತ್ತಿದೆ ಅಲ್ಲದೇ ಪ್ರತಿ ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಕಾರ್ಯಪ್ರವೃತ್ತವಾಗಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ದಿ ಪರ್ವವೇ ನಡೆದಿದೆ ಎಂದು ಹೇಳಿರುವ ಅವರು ಸದ್ಯ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ದೇವಸ್ಥಾನಗಳ ಜಿರ್ಣೋದ್ದಾರ, ಅಭಿವೃದ್ದಿಗೆ 1 ಕೋಟಿ 20 ಲಕ್ಷ ರೂ ಅನುದಾನ, ಪಂಚಾಯತರಾಜ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸಾತನಳ್ಳಿಯಿಂದ ಹೋಮನಳ್ಳಿ ರಸ್ತೆ ನಿರ್ಮಾಣಕ್ಕೆ 150.00 ಲಕ್ಷ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮತ್ತು ಜೊಯಿಡಾ ತಾಲೂಕಿನ ವಿವಿಧ ಶಾಲೆಗಳಿಗೆ ನೂತನ ಕೊಠಡಿಗಳ ನಿರ್ಮಾಣ: ಹಳಿಯಾಳ 252.3 ಲಕ್ಷಗಳು ಮತ್ತು ಜೋಯಿಡಾ – 121.8 ಲಕ್ಷಗಳು ಮಂಜೂರಿ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 40.00 ಲಕ್ಷ ಅನುದಾನ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ. 42.50 ಲಕ್ಷ, ಪಂಚಾಯತರಾಜ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ವಿವಿಧ ರಸ್ತೆ ಕಾಮಗಾರಿಗಳಿಗಾಗಿ ರೂ. 15 ಕೋಟಿ ವಿಶೇಷ ಅನುದಾನ, ಜೋಯಿಡಾ ತಾಲೂಕಿನ ಜಾನಪದ ವಿಶ್ವವಿದ್ಯಾಲಯಕ್ಕೆ ರೂ. 450 ಲಕ್ಷಅನುದಾನ, ಕರ್ನಾಟಕ ನೀರಾವರಿ ನಿಗದ ನಿಯಮಿತದಿಂದ ರಸ್ತೆ ಕಾಮಗಾರಿಗಳಿಗಾಗಿ ರೂ. 5 ಕೋಟಿ ಅನುದಾನ, ಪಂಚಾಯತರಾಜ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ವಿವಿಧ ರಸ್ತೆ ಕಾಮಗಾರಿಗಳಿಗಾಗಿ ರೂ. 30 ಲಕ್ಷ ಅನುದಾನ, ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿಯಲ್ಲಿ ಜೋಯಿಡಾ ತಾಲೂಕಿನ ಮೂರು ಅತಿ ಮುಖ್ಯ ರಸ್ತೆಗಳ ಸುಧಾರಣೆ ಮತ್ತು ಸೇತುವೆ ನಿರ್ಮಾಣಕ್ಕೆ ರೂ. 5 ಕೋಟಿ, ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ವಹಣೆ ವೆಚ್ಚದಲ್ಲಿ – ರೂ. 100 ಲಕ್ಷ ಅನುದಾನ ಮಂಜೂರಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ. ಅಲ್ಲದೇ ಸಿ.ಎಸ್.ಆರ್.ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ 16-01-2018 ರಿಂದ ಜೆ.ಸಿ.ಬಿ. ಇಂಡಿಯಾ ಲಿಮಿಟೆಡ್ ಮತ್ತು ಟಾಟಾ ಹಿಟಾಚಿ ಇವರ ಸಹಯೋಗದೊಂದಿಗೆ 7 ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ ಹಾಗೂ ಸಿಮೆಂಟ್ ಕಂಪನಿಯ ವತಿಯಿಂದ ಹಳಿಯಾಳದ ಡೌಗೇರಿ(ದೇವಗಿರಿ) ಕೆರೆ ಸುಧಾರಣೆ – ರೂ. 99 ಲಕ್ಷಗಳ ಅನುದಾನ ಮಂಜೂರಾಗಿದೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದ್ದಾರೆ.
Leave a Comment