ಹಳಿಯಾಳ:- ಬಿಜೆಪಿ ಪಕ್ಷದ ರಾಜ್ಯ ಹಿಂದೂಳಿದ ವರ್ಗಗಳ ಮೋರ್ಚಾ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಹಳಿಯಾಳದ ನಿವೃತ್ತ ಎಸ್ಪಿ ಹಾಗೂ ಬಿಜೆಪಿ ಮುಖಂಡ ಗಣಪತಿ ರಾಮರಾಯ (ಜಿಆರ್) ಪಾಟೀಲ್ ನೇಮಕಗೊಂಡಿದ್ದಾರೆ. ಜಿ.ಆರ್.ಪಾಟೀಲ್ ಅವರನ್ನು ಆಯ್ಕೆ ಮಾಡಿರುವ ರಾ.ಹಿಂ.ವ.ಮೋ.ಕಾಸಮೀತಿ ರಾಜ್ಯಾಧ್ಯಕ್ಷ ಹಾಗೂ ಎಮ್.ಎಲ್.ಸಿ ಆಗಿರುವ ಬಿಜೆ ಪುಟ್ಟಸ್ವಾಮಿ ಆಯಾ ಜಿಲ್ಲೆ, ತಾಲೂಕುಗಳಲ್ಲಿ ಸಂಘಟನೆ, ಸಮಾವೇಶ ನಡೆಸಿ ಹಿಂದೂಳಿದ ವರ್ಗಗಳ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಹಾಗೂ ಸರ್ಕಾರದಿಂದ ಹಿಂದೂಳಿದ ವರ್ಗಗಳಿಗೆ ಆದ ಹಿನ್ನಡೆ, ಅನ್ಯಾಯದ ವಿರುದ್ದ ಪ್ರತಿಭಟನೆ ನಡೆಸಿ ಜನರಿಗೆ ಅರಿವು ಮೂಡಿಸಿ 2018ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವಂತೆ ನೇಮಕ ಪತ್ರದಲ್ಲಿ ಪಾಟೀಲ್ಗೆ ಸೂಚಿಸಿದ್ದಾರೆ.
Leave a Comment