• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪರೇಶ ಮೇಸ್ತನ ಮನೆಗೆ ಬರುವಾಗ ಅಮಿತ್ ಷಾ ಸಿ.ಬಿ.ಐ ಯನ್ನು ಕರೆತರಲಿ ; ಬಿ.ಸಿ.ಸಿ. ಅಧ್ಯಕ್ಷ ಜಗದೀಪ ತೆಂಗೇರಿ

February 14, 2018 by Gaju Gokarna Leave a Comment

ಹೊನ್ನಾವರ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತಾಷಾ ಕಳೆದ ಡಿಸೆಂಬರ 8 ರಂದು ನಿಗೂಢವಾಗಿ ಸಾವನ್ನಪ್ಪಿದ ಹೊನ್ನಾವರದ ಪರೇಶ ಮೇಸ್ತನ ಮನೆಗೆ ಇದೆ ದಿನಾಂಕ 20 ರಂದು ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು ಅವರನ್ನು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೊನ್ನಾವರ ಇತಿಹಾಸದಲ್ಲಿಯೇ ಎಂದು ನಡೆಯಬಾರದ ಘಟನೆ ಡಿಸೆಂಬರ 6 ರಂದು ನಡೆದು ಎರಡು ಕೋಮುಗಳಲ್ಲಿ ಘರ್ಷಣೆ ಸಂಭವಿಸಿ ಮತೀಯ ಸಾಮರಸ್ಯಕ್ಕೆ ಧಕ್ಕೆ ತಂದಿತ್ತು. ಈ ಸಂದರ್ಭದಲ್ಲಿ  ಪರೇಶ ಮೇಸ್ತ ನಿಗೂಢವಾಗಿ ಸಾವನ್ನಪ್ಪಿ ಆತನ ಕಳೆಬರ ನಗರದ ಶೆಟ್ಟಿಕೆರೆಯಲ್ಲಿ ಡಿಸೆಂಬರ 8 ರಂದು ಸಂಶಯಾಸ್ಪದವಾಗಿ ಪತ್ತೆಯಾಗಿತ್ತು.
ಈ ಘಟನೆಯಿಂದ ಶಾಂತಿಪ್ರಿಯ ಹೊನ್ನಾವರದಲ್ಲಿ ಶಾಂತಿ ಕದಡಿತ್ತು. ಸಂಶಯಾಸ್ಪದವಾಗಿ ಸಾವನ್ನಪ್ಪಿದ ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ, ತಪ್ಪಿತಸ್ಥರು ಏಷ್ಟೇ ಬಲಾಢ್ಯರಾಗಿದ್ದರೂ ಕೂಡ ಅವರನ್ನು ತಕ್ಷಣ ಬಂಧಿಸಿ ಉಗ್ರಶಿಕ್ಷೆ ನೀಡಿ ಮತ್ತು ಪರೇಶ ಮೇಸ್ತನ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಮತ್ತು ಸ್ಥಳೀಯ ಶಾಸಕಿ  ಶಾರದಾ ಶೇಟ್ಟಿ ಆಗ್ರಹಿಸಿದ್ದರು. ಆದರೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕಿ ಶಾರದ ಶೆಟ್ಟಿ ಮತ್ತು ಮೃತ ಪರೇಶ ಮೇಸ್ತನ ತಂದೆಯ ಆಗ್ರಹದಂತೆ ನಡೆದ ಘಟನೆಯ ಕುಲಂಕುಶ ತನಿಖೆ ನಡೆಸುವಂತೆ ಕೇಂದ್ರದ ಸಿ.ಬಿ.ಐ. ಸಂಸ್ಥೆಗೆ ತನಿಖೆಯ ಜವಾಬ್ದಾರಿ ವಹಿಸಿ ತಮ್ಮ ಪಾರದರ್ಶಕತೆ ಮೆರೆದರು. ಅಮಾಯಕ ಪರೇಶ ಮೆಸ್ತ ಸಾವನ್ನಪ್ಪಿ ಇಂದಿಗೆ ಸರಿ ಸುಮಾರು 66 ದಿನಗಳು ಕಳೆಯುತ್ತಾ ಬಂದಿದೆ. ಪರೇಶ ಮೇಸ್ತನ ಶವ ಪತ್ತೆಯಾದ ಕೇವಲ 5 ದಿನದಲ್ಲೇ ಡಿಸೆಂಬರ 13 ರಂದು ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸುವಂತೆ ಸಿ.ಬಿ.ಐ.ಗೆ ಪತ್ರ ಬರೆದಿದೆ. ಸಿ.ಬಿ.ಐ. ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಶ್ರೇಷ್ಠ ತನಿಖಾ ಸಂಸ್ಥೆ ಎಂದು ಹೆಸರು ಪಡೆದುಕೊಂಡಿದೆ. ಆದರೆ ಹಿಂದಿನ ಕಾಂಗ್ರೆಸ್ ನೇತ್ರತ್ವದ ಸರಕಾರ ಇದ್ದಾಗ ಬಿ.ಜೆ.ಪಿ. ಯವರು ಸಿ.ಬಿ.ಐ. ನ್ನು ಚೋರ್ ಬಚಾವ್ ಸಂಸ್ಥೆ ಎಂದು ಕರೆಯುತ್ತಿದ್ದರು. ಆದರೆ ಅದೇ ಸಿ.ಬಿ.ಐ. ಸಂಸ್ಥೆ ಇಂದು ಬಿ.ಜೆ.ಪಿ. ನೇತ್ರತ್ವದ ಸರಕಾರದ ಅಧಿನದಲ್ಲಿದೆ. ಆದರೂ ನಮಗೆ ಸಿ.ಬಿ.ಐ ಸಂಸ್ಥೆಯ ಮೇಲೆ ಅದೊಂದು ಉತ್ಕ್ರಷ್ಟ ಸಂಸ್ಥೆ ಅನ್ನುವ ನಂಬಿಕೆ ಇದೆ. ಆದರೆ 60 ದಿನಗಳು ಕಳೆದರೂ ಕೇಂದ್ರ ಸರಕಾರ ಯಾಕೆ ಸಿ.ಬಿ.ಐ. ಮೇಲೆ ಒತ್ತಾಯ ಹೇರಿ ಶೀಘ್ರ ತನಿಖೆ ಕೈಗೊಂಡು ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯಿಸುತ್ತಿಲ್ಲಾ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಮ್ಮ ಜಿಲ್ಲೆಯ ಕೇಂದ್ರದ ಪ್ರಭಾವಿ ಸಚಿವರಾದ ಅನಂತಕುಮಾರ ಹೆಗಡೆ ಯಾಕೆ ಶೀಘ್ರ ತನಿಖೆ ಕೈಗೊಳ್ಳಲು ಕೇಂದ್ರದ ಗೃಹ ಮಂತ್ರಿಗಳಿಗೆ ಒತ್ತಾಯಿಸುತ್ತಿಲ್ಲ. ಅಥವಾ ಮುಂಬರುವ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಈ ವಿಷಯವನ್ನು ಜೀವಂತವಾಗಿಟ್ಟುಕೊಳ್ಳುವ ಹುನ್ನಾರವೇ ಯಾವುದು ಅರ್ಥವಾಗುತ್ತಿಲ್ಲಾ. ಕಾರಣ ಯಾರು ಕೂಡ ಸಾವಿನ ಮನೆಯಲ್ಲಿ ರಾಜಕೀಯ ಮಾಡದೇ ಕೇಂದ್ರದ ಅದೀನದಲ್ಲಿರುವ ಸಿ.ಬಿ.ಐ. ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಶೀಘ್ರ ತನಿಖೆ ನಡೆಸುವಂತೆ ಒತ್ತಾಯಿಸೋಣಾ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪರೇಶ ಮೇಸ್ತನ ಮನೆಗೆ ಬರುವಾಗ ಅವರದೇ ಸರಕಾರದ ಸಿ.ಬಿ.ಐ. ತನಿಖಾ ಸಂಸ್ಥೆಯ ತನಿಖಾಧಿಕಾರಿಗಳನ್ನು ಕರೆತಂದು ನೊಂದ ಪರೇಶ ಮೇಸ್ತನ ಕುಟುಂಬಕ್ಕೆ ಇನ್ನೊಂದು ವಾರದಲ್ಲಿ ನ್ಯಾಯ ಒದಗಿಸಿಕೊಡುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಾಯಕ ಶೇಟ್, ದಾಮೋದರ ನಾಯ್ಕ,  ಲಿಲ್ಲಿ ಫರ್ನಾಂಡಿಸ್, ಬಿ.ಸಿ.ಸಿ. ಕಾರ್ಯದರ್ಶಿ  ಉಮಾ ಮೇಸ್ತ,  ರಾಧಾ ಪಾವಸ್ಕರ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಾಯಸ್, ಕಾಂಗ್ರೆಸ್ ಮೀನುಗಾರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ ತಾಂಡೇಲ್, ಸ್ಥಳೀಯ ಅಧ್ಯಕ್ಷ ಮಂಜುನಾಥ ಖಾರ್ವಿ, ಪ್ರಚಾರ ಸಮಿತಿ ಉಪಾಧ್ಯಕ್ಷ ವಿನಾಯಕ ನಾಯ್ಕ, ಪಕ್ಷದ ಮುಖಂಡರಾದ  ಮರಿಯಾ ಗೊನ್ಸಾಲ್ವಿಸ್, ಶೇಖರ ಚಾರೋಡಿ, ಗಣಪತಿ ಮೇಸ್ತ, ಕೃಷ್ಣ ಖಾರ್ವಿ, ಇನ್ನು ಮುಂತಾದವರಿದ್ದರು.

watermarked 14 ºhnr 01Amit Sha.01 a

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಅಮಿತ್ ಷಾ, ಉಗ್ರಶಿಕ್ಷೆ ನೀಡಿ ಮತ್ತು ಪರೇಶ ಮೇಸ್ತನ ಕುಟುಂಬಕ್ಕೆ ಯೋಗ್ಯ ಪರಿಹಾರ, ಕರೆತರಲಿ, ಕೋಮು, ಘರ್ಷಣೆ ಸಂಭವಿಸಿ, ಜಗದೀಪ ತೆಂಗೇರಿ, ಪರೇಶ ಮೇಸ್ತ, ಬರುವಾಗ, ಬಿ.ಸಿ.ಸಿ. ಅಧ್ಯಕ್ಷ, ಮತೀಯ ಸಾಮರಸ್ಯ, ಮನೆಗೆ, ಸಿ.ಬಿ.ಐ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...