• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಿ. ಪ್ರಾ. ಶಾಲೆ ಹಾಡಗೆರಿಯ ವಾರ್ಷಿಕ ಸ್ನೇಹ ಸಮ್ಮೇಳನ

February 20, 2018 by Gaju Gokarna Leave a Comment

ಹೊನ್ನಾವರ .ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಹೊನ್ನಾವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಡಗೇರಿ, ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪ ಹೊನ್ನಾವರ, ಇವರ ಆಶ್ರಯದಯಲ್ಲಿ 2017-18 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವು  ದಂದು ಹಿ. ಪ್ರಾ. ಶಾಲೆ, ಹಾಡಗೇರಿ, ಹೊನ್ನಾವರದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ  ಶಾಸಕ ಮಂಕಾಳು ಎಸ್. ವೈದ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಈ ಊರಿನ ಬಗ್ಗೆ ನನಗೆ ಕನಿಕರವಿದ್ದು, ತಾಲ್ಲೂಕು ಮತ್ತು ಜಿಲ್ಲೆಯ ಗಡಿಬಾಗದ ಗ್ರಾಮವಾಗಿರುವುದುರಿಂದ ಇಲ್ಲಿಯ ಈಗಿನ ಪರಿಸ್ಥಿತಿಯ ಬಗ್ಗೆ ತುಂಬಾ ಬೇಜಾರಾಗಿದ್ದು, ಹಾಡಗೇರಿ ಶಾಲೆಯ ಮತ್ತು ಊರಿನ ಜನತೆಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಒದಗಿಸಲು ತನ್ನ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ  ಅನ್ನಪೂರ್ಣಾ ಶಾಸ್ತ್ರಿ (ಅಧ್ಯಕ್ಷರು, ಗ್ರಾಮ ಪಂಚಾಯತ್ ನಗರಬಸ್ತಿಕೇರಿ) ಯವರು ಮಕ್ಕಳನ್ನು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಹಾಡಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿರುವ  ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಾತನಾಡಿ, “ಹಣವೊಂದಿದ್ದರೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ, ಹಣವನ್ನು ಸರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುವುದನ್ನು ವಿದ್ಯೆ ಹೇಳಿಕೊಡುತ್ತದೆ. ಲಕ್ಷ್ಮಿ ಕೃಪಾಕಟಾಕ್ಷಕ್ಕಿಂತಲೂ ಸರಸ್ವತಿಯ ಆಶಿರ್ವಾದ ಬೇಕು. ಅದಿದ್ದಾಗ ಮಾತ್ರ ಜ್ಞಾನಜ್ಯೋತಿಯನ್ನು ಬೆಳಗಿಸಲು ಸಾಧ್ಯವಾಗುತ್ತದೆ.” ಎಂದು ಈ ಶುಭ ಸಂದರ್ಭದಲ್ಲಿ ಸಿಲೆಕ್ಟ್ ಫೌಂಡೇಶನ್ ವತಿಯಿಂದ ಶಾಲೆಯಲ್ಲಿ ಓದುತ್ತಿರುವ 50 ಮಕ್ಕಳಿಗೆ 2 ಜೊತೆ ಉಚಿತ ಸಮವಸ್ತ್ರವನ್ನು ಒದಗಿಸುವುದಾಗಿ ತಿಳಿಸಿದರು. ಹಾಗೂ ಶಾಲೆಗೆ ಬೇಕಾಗಿರುವ ನೂತನ ಕಟ್ಟಡಕ್ಕೆ ಸ್ಥಳಾವಕಾಶದ ಅವಶ್ಯಕತೆ ಇದ್ದು, ಇದರ ವ್ಯವಸ್ಥೆ ಆದರೆ, ಕಟ್ಟಡಕ್ಕೆ ಬೇಕಾಗುವ ಸುಮಾರು 1.5 ಕೋಟಿ  ಧನ ಸಹಾಯ ಮಾಡಲು ಮುಂದೆ ಬಂದಿರುವ ದಾನಿಗಳ ಜೊತೆ ಮುಂದಿನ ಯೋಜನೆಗಳ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ  ಉಲ್ಲಾಸ ಈಶ್ವರ ನಾಯ್ಕ , ಕುಮಾರಿ ಪುಷ್ಪಾ. ಜಿ. ನಾಯ್ಕ ,  ಗೋವಿಂದ ಸುಬ್ಬು ನಾಯ್ಕ ,   ಉದಯ ಬಾಬು ನಾಯ್ಕ ,  ರಾಘವೇಂದ್ರ  ನಾಯ್ಕ ,  ಬಾಲು ಮಸಣು ಮರಾಠಿ , ಗಣಪತಿ ಗೋವಿಂದ ಮರಾಠಿ ,  ನಾರಾಯಣ ಬಲೀಂದ್ರ ನಾಯ್ಕ ,   ಮಂಜುನಾಥ ಗಣಪು ಹಳ್ಳೇರ ,  ಸಿದ್ದು ಯಾಪಲಪರವಿ, ,   ಶ್ರೀಧರ ಶೆಟಿ ್ಟ ,  ಶಂಕರ ಹರಿಕಾಂತ ,  ಎನ್. ಎಸ್. ನಾಯ್ಕ  ,  ರತ್ನಾಕರ ದೇಶಭಂಡಾರಿ ,   ಕೃಷ್ಣ ಶಿವು ಮರಾಠಿ ,   ಬೂದಾ ಶಿವು ಮರಾ(ಅಧ್ಯಕ್ಷರು, ಶ್ರೀ ವೀರಾಂಜನೇಯ ಹಳೆ ವಿದ್ಯಾರ್ಥಿಗ¼,   ಸುರೇಶ ನಾಯ್ಕ ಮಾನ್ಯ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಹೊನ್ನಾವರ  ರವರು ಉಪಸ್ಥಿತರಿದ್ದರು.

watermarked DSC6583 edited

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಉತ್ತರ ಕನ್ನಡ, ಕ್ಷೇತ್ರ ಬಂಗಾರಮಕ್ಕಿ ಗೇರಸೊಪ್ಪ ಹೊನ್ನಾವರ, ತಾಲೂಕ ಪಂಚಾಯತ ಹೊನ್ನಾವರ, ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನಿಧ್ಯ, ವಾರ್ಷಿಕ ಸ್ನೇಹ ಸಮ್ಮೇಳನ, ಹಾಡಗೆರಿಯ, ಹಿ.ಪ್ರಾ ಶಾಲೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...