ಹೊನ್ನಾವರ:
ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ ರಾಜಶೇಖರ ಮನ್ಸೂರ್ ಅವರ ಗಾಯನ ಕಾರ್ಯಕ್ರಮ ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಫೆ.21ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.
“ಜೈಪುರ-ಅತ್ರೋಲಿ ಘರಾಣೆ’ ಪರಂಪರೆಯ ಶ್ರೇಷ್ಠ ಗಾಯಕರಲ್ಲೊಬ್ಬರಾದ ರಾಜರೇಖರ ಮನ್ಸೂರ್ ಖ್ಯಾತ ಹಿಂದೂಸ್ಥಾನಿ ಗಾಯಕರಾಗಿದ್ದ ಮಲ್ಲಿಕಾರ್ಜುನ ಮನ್ಸೂರ್ ಅವರ ಮಗ.
‘ಅಲ್ಲಮ ಪ್ರಭು ಕಡಕೋಳ ತಬಲಾದಲ್ಲಿ ಹಾಗೂ ಗೌರೀಶ ಯಾಜಿ ಕೂಜಳ್ಳಿ ಹಾರ್ಮೋನಿಯಂನಲ್ಲಿ ಮನ್ಸೂರ್ ಅವರ ಗಾಯನಕ್ಕೆ ಸಾಥ್ ನೀಡಲಿದ್ದಾರೆ’ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Leave a Comment