ಹೊನ್ನಾವರ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾಡಳಿತ ಉತ್ತರಕನ್ನಡ ತಾಲೂಕ ಆಡಳಿತ ಹೊನ್ನಾವರ ಹಾಗೂ ಬಂಜಾರಾ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಟ್ರಸ್ಟ À (ಉ.ಕ) ಇವರ ಸಹಯೋಗದೊಂದಿಗೆ ಹೊನ್ನಾವರದ ಪಟ್ಟಣ ಪಂಚಾಯತಿಯಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತೋತ್ಸವ ಸಮಾರಂಭ ನಡೆಯಿತು.
ಹೊನ್ನಾವರ ತಾಲೂಕಾ ದಂಡಾಧಿಕಾರಿಗಳಾದ ವಿ. ಆರ್. ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತg Àಮಾತನಾಡಿ ಶ್ರೀ ಸಂತ ಸೇವಾಲಾಲ್ ರವರ ಬಂಜಾರಾ ಸಮುದಾಯದ ವಿಶಿಷ್ಟತೆಯನ್ನು ತಿಳಿಸಿದರು.
ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಕಾರ್ಯಕ್ರಮದ ಅಧ್ಯಕ್ಷತೆಯನು ವಹಿಸಿ. ಬಂಜಾರಾ ಸಂಸ್ಕøತಿಯು ಶ್ರೀಮಂತ ಸಂಸ್ಕøತಿಯಾಗಿದ್ದು ಶ್ರೀ ಸಂತ ಸೇವಾಲಾಲರ ಜೀವನ ವಿಶಿಷ್ಟ ಕುರಿತು ಮಾತನಾಡಿದರು.
ಝಿ ಕನ್ನಡದಲ್ಲಿ ಗಂಗಾ ಧಾರವಾಹಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಣ್ ರಜಪೂತರವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಶೇ 95% ಅಂಕ ಪಡೆದ ಕುಮಾರಿ ನಮಿತ ನಾಯ್ಕ ಹಾಗೂ ಎಂ.ಕಾಂ ದಲ್ಲಿ ಶೇ 67% ಅಂಕ ಪಡೆದ ಸುನೀತಾ ಆರ್. ಮಾಳಗಿಮನಿ ಇವರಿಗೆ ಬಹುಮಾನ ನೀಡಲಾಯಿತು.
ಎಸ್.ಡಿ.ಎಮ್. ಕಾಲೇಜಿನ ಉಪನ್ಯಾಸಕರಾದ ರಾಜು ಮಾಳಗಿಮನಿ ಇವರಿಗೆ ಬಂಜಾರಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ|| ಪವಾರ್ ರವರು ಉಪನ್ಯಾಸ ನೀಡಿದರು. ಕಾಳ ನಾಯ್ಕ ಸ್ವಾಗತಿಸಿದರು. ರಾಜು ಮಾಳಗಿಮನಿ ವಂದಿಸಿದರು. ಗಂಗಾಧರ ನಾಯ್ಕ ಕೆ. ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಶಿಕಾಂತ ರಾಠೋಡ, ಪಾಟೀಲ್, ಅಂಬರೀಷ ಪವಾರ್, ಸುದೀಶ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಪ್ಪು ಚವ್ಹಾಣ, ಮನೋಹರ ರಾಠೋಡ, ಸಂತೋಷ ಲಮಾಣಿ, ಅಶೋಕ ಲಮಾಣಿ, ರಮೇಶ ದೇವೇಂದ್ರ ನಾಯ್ಕ, ಕುಮಾರ ನಾಯ್ಕ, ಗೋಪಾಲ ನಾಯ್ಕ, ಬಂಜಾರಾ ಸಮುದಾಯದವರು ಮತ್ತು ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.
Leave a Comment