ಹಳಿಯಾಳ: ಸರ್ಕಾರದಿಂದ ಮಂಜೂರಾಗುವ ಯೋಜನೆಗಳನ್ನು ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ಭಾಗವತಿ ಗ್ರಾಮದಲ್ಲಿ ಗೌಳಿ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಮನೆ ದುರಸ್ತಿಗಾಗಿ ಮಂಜೂರಾದ ಚೆಕ್ಗಳನ್ನು ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸರ್ಕಾರ ನೂರಾರು ಕೋಟಿ ಅನುದಾನ ನೀಡುತ್ತಿದ್ದು ಜನರು ಅಭಿವೃದ್ದಿಪರ ಸರ್ಕಾರದ ಚಿಂತನೆಯನ್ನು ಅರಿಯಬೇಕು ಹಾಗೂ ಕಾಮಗಾರಿಗಳು ಗುಣಮಟ್ಟದಾಗಿರುವಂತೆ ಗ್ರಾಮಸ್ಥರು, ಜನಪ್ರತಿನಿಧಿಗಳು ನೋಡಿಕೊಳ್ಳಬೇಕೆಂದರು. ವಿವಿಧ ಕಾಮಗಾರಿಗಳ, ಶಿಲಾನ್ಯಾಸ ಉದ್ಘಾಟನೆ: ಸಚಿವರು ಅಡ್ಡಿಗೇರಾ ಗ್ರಾಮದ ಅಂಗನವಾಡಿ ಕೇಂದ್ರÀ, ಕಾವಲವಾಡ ಗ್ರಾಮದ ಪಂಚಾಯತ್ ನೂತನ ಕಟ್ಟಡ, ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿದರು ಹಾಗೂ ಕಾವಲವಾಡ ಗ್ರಾಮದ ಸಭಾಭವನದ ಶಿಲಾನ್ಯಾಸ ನೆರವೇರಿಸಿದರು. ಮಹಿಳಾ ಸಂಘಟನೆಗಳ ಸಂಘದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ಎಸ್ಎಲ್ಸಿಯಲ್ಲಿ ಗರಿಷ್ಟ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ತಾಲೂಕಿನ ಒಟ್ನಾಳ ಗ್ರಾಮದ ನಿರಾಶ್ರಿತರಿಗೆ ಮಂಜೂರಾದ ಜಮೀನುಗಳ ಪಹಣಿಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಷತ್ ಸದಸ್ಯ ಎಸ.ಎಲ್ ಘೋಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರೀ ಮಿಶಾಳಿ, ಲಕ್ಮೀ ಕೋರ್ವೇಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಸ್ ಕೋರ್ವೇಕರ್, ತಾ ಪಂ ಅಧ್ಯಕ್ಷ ರೀಟಾ ಸಿದ್ಧಿ, ನೀಲವ್ವ ಮಡಿವಾಳ, ತಹಶಿಲ್ಧಾರ ವಿಧ್ಯಾಧರ ಗುಳಗುಳಿ, ತಾ.ಪಂ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ಹೆಸ್ಕಾಂನ ರವೀಂದ್ರ ಮೆಟಗುಡ್ಡ, ಆರ್.ಎಚ್ ಕುಲಕರ್ಣಿ ಇತರರು ಇದ್ದರು.
Leave a Comment