• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಲವು ಅಡ್ಡಿ ಆತಂಕಗಳ ನಡುವೆಯೂ ಯಶಸ್ವಿಗೊಂಡ ಉಜ್ವಲ ಯೋಜನೆ

March 7, 2018 by Gaju Gokarna Leave a Comment

ಹೊನ್ನಾವರ , ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣಿ, ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ಗಳನ್ನು ವಿತರಿಸಲಾಗಿದೆ.
ಬಡವರ ಕನಸಿಗೆ ಕೊಡಲಿಯೇಟು ನೀಡುವ ದುರುದ್ದೇಶದಿಂದ ಈ ಬಡವರಪರ ಯೋಜನೆಯನ್ನು ಸಕಾಲದಲ್ಲಿ ಬಡವರಿಗೆ ತಲುಪಿಸುವಲ್ಲಿ ಕಾಣದ ರಾಜಕೀಯದ ಕುಟಿಲ ತಂತ್ರವನ್ನು ಹೂಡಿ ಅಡ್ಡಿಯುಂಟು ಮಾಡುತ್ತಿದ್ದರು. ಅದನ್ನು ಲೆಕ್ಕಿಸದೆ ಬಡವರಿಗೆ ಈ ಯೊಜನೆಯ ಸೌಲಭ್ಯವನ್ನು ದೊರಕಿಸಿಕೊಡಲೇಬೇಕೆಂದು ಪಣತೊಟ್ಟು ಎಷ್ಟೇ ಕಷ್ಟ ಬಂದರೂ ಅದನ್ನು ಲೆಕ್ಕಿಸದೇ ಬಡವರ ಹಕ್ಕಿಗಾಗಿ, ನ್ಯಾಯಕ್ಕಾಗಿ, ಸ್ನೇಹಕ್ಕಾಗಿ ಸದಾ ಸಿದ್ಧ ಎಂದು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಅರ್ಹರಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿರುವುದು ಅಭಿನಂಧನಾರ್ಹ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಉಜ್ವಲ ಯೋಜನೆ ಬಡವರ ಪರವಾದ ಯೋಜನೆಯಾಗಿದೆ. ಇದರಿಂದ ಕಡುಬಡವರಿಗೆ ತುಂಬಾ ಅನುಕೂಲತೆ ಉಂಟಾಗುತ್ತಿದೆ. ಮಹಿಳೆಯರ ಸ್ವಾಸ್ಥ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಈ ಯೋಜನೆಯ ಸೌಲಭ್ಯಗಳಲ್ಲಿ ರಾಜಕೀಯ ತಂತ್ರ ಹೂಡುವುದು ಸರಿಯಲ್ಲ. ಬಡವರಿಗೆ ಅನುಕೂಲತೆ ಒದಗಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಉದ್ದೇಶವಾಗಿರಬೇಕು. ಬಡವರ ಪರ ಕೆಲಸವನ್ನು ಯಾರೇ ಮಾಡುತ್ತಿದ್ದರೂ ಅವರಿಗೆ ಪ್ರೋತ್ಸಾಹ ನೀಡಬೇಕೇ ವಿನಃ ಅಡ್ಡಿಪಡಿಸುವುದು ಸರಿಯಲ್ಲ. ಜನಪರ ಯಾವುದೇ ಯೋಜನೆಗಳಿದ್ದರೂ ಅವುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಸದಾ ಕಂಕಣಬದ್ಧರಾಗಿರುತ್ತೇವೆ ಎಂದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಉಜ್ವಲ ಯೋಜನೆ, ನಾಗರಾಜ ನಾಯಕ ತೊರ್ಕೆಯವರು, ಪಡುವಣಿ, ಬರ್ಗಿ, ಬಿಜೆಪಿ ಕಾರ್ಯಕರ್ತರು, ಮಾದನಗೇರಿ, ಮುಗ್ವಾ, ಯಶಸ್ವಿಗೊಂಡ, ಹಲವು ಅಡ್ಡಿ ಆತಂಕಗಳ ನಡುವೆ, ಹಿರೇಗುತ್ತಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar