ಹೊನ್ನಾವರ :
ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ, ವಿವೇಕ ಶಿಕ್ಷಣ ವಾಹಿನಿ, ಮಂಡ್ಯ ಇವರು ಆಯೋಜಿಸಿದ, ಸ್ವಾಮಿ ಪುರುಷೋತ್ತಮಾನಂದ ವಿರಚಿತ ‘ ವಿದ್ಯಾರ್ಥಿಗಾಗಿ’ ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಸ್ವಾಮಿ ವಿವೇಕಾನಂದರ 155ನೇ ಜನ್ಮದಿನದಂದು ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಯುವ ಬ್ರಿಗೇಡ್ ನ ಸಕ್ರೀಯ ಕಾರ್ಯಕರ್ತರಾದ ಗೌರವ ಕಲ್ಯಾಣಪುರ ಹಾಗೂ ಅನಂತ ಭಟ್ಟ ಈ ಪ್ರಕ್ರೀಯೆಯ ಜವಾಬ್ದಾರಿ ವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಸಮಯ ಪ್ರಜ್ಞೆಯ ಮಹತ್ವವನ್ನು ಮನಗಾಣಿಸಿ, ನಿರ್ಭಯವಾಗಿ ಪರೀಕ್ಷೆ ಎದುರಿಸಲು, ಸಹಕಾರಿಯಾಗುವಂತಾಗಲು ಈ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ‘ವಿದ್ಯಾರ್ಥಿಗಾಗಿ’ ಪುಸ್ತಕವು ಏಕಾಗ್ರತೆ ಹಾಗೂ ಸಮಯ ಪ್ರಜ್ಞೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ಹಲವಾರು ಮಾಹಿತಿಯನ್ನು ನೀಡುವ ಅಮೂಲ್ಯ ಕೃತಿಯಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ಪ್ರಮಾಣಪತ್ರ ಮತ್ತು ವಿವೇಕಾನಂದರ ಜೀವನ ಚರಿತ್ರೆ ಹಾಗೂ ಫೋಟೊಗಳನ್ನು ವಿತರಿಸಿದರು. ಶಾಲಾ ವಿಜ್ಞಾನ ಶಿಕ್ಷಕಿ ಕು. ಪವಿತ್ರಾ ಭಟ್ಟ ಹಾಗೂ ಶಿಕ್ಷಕ ವೃಂದದವರು ಪರೀಕ್ಷೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಶಿಕ್ಷಕ ಅಶೋಕ ನಾಯ್ಕ ಸ್ವಾಗತಿಸಿದರು. ಶಾಲೆಯ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment