ಹಳಿಯಾಳ:-
ಸಿಎಂ ಸಿದ್ದರಾಮಯ್ಯ ಸರ್ಕಾರವು ಹಳಿಯಾಳ ಪಟ್ಟಣದ ಇಂದಿರಾನಗರದ ಜನರ ಹಲವು ದಶಕಗಳ ಕನಸನ್ನು ನನಸು ಮಾಡುವುದರ ಮೂಲಕ 39 ನಿವೇಶನಗಳನ್ನು ಖಾಯಂ ಮಾಡಿ ಮಂಜೂರಾತಿ ಹಕ್ಕುಪತ್ರ ನೀಡಿದ್ದು ಕಾಂಗ್ರೇಸ್ ಸರ್ಕಾರದ ಜನಪರ ಧೋರಣೆಯನ್ನು ಜನರು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಇಂದಿರಾನಗರದ 39 ಜನರಿಗೆ ನಿವೇಶನ ಹಕ್ಕುಪತ್ರ ಮಂಜೂರಿ ಮಾಡಿಸಿದ್ದಕ್ಕಾಗಿ ಆ ಭಾಗದ ಜನರಿಂದ ನಡೆದ ಸಚಿವರಿಗೆ ಸನ್ಮಾನ ಹಾಗೂ ಆರ್.ವಿ.ದೇಶಪಾಂಡೆ ಅವರ 71 ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಕಳೆದ 99 ವರ್ಷಗಳ ಅವಧಿಗೆ ಭೂ ಭಾಡಿಗೆಗೆ ನೀಡಿದ 39 ನಿವೇಶನಗಳಿಗೆ ಕರ್ನಾಟಕ ಸರ್ಕಾರ ಖಾಯಂ ಮಂಜೂರಾತಿಯನ್ನು ಸಚಿವ ಸಂಪುಟ ಸಭೆಯಲ್ಲಿ ನೀಡುವಲ್ಲಿ ಪ್ರಾಮಾಣಿಕವಾಗಿ ತಾವು ಶ್ರಮಿಸಿದ್ದರ ಫಲವಾಗಿ ಇಂದು ನಿವೇಶನ ಖಾಯಂ ಆಗಿದ್ದು ಸಂತಸ ತಂದಿದೆ ಎಂದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟಿಲ್, ಪುರಸಭೆ ಸದಸ್ಯ ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ, ನಗರದ ಮುಖಂಡರಾದ ಹನುಮಂತ ಮಂಡಲ, ಎಚ್.ಎನ್.ಹನುಮಂತಯ್ಯ, ಜಕ್ರಯ್ಯಾ ಮಾದರ, ಮತ್ತಯ್ಯಾ, ವೀಣಾ ಮಾದರ, ಕವಿತಾ ಮಾದರ, ಏಸಯ್ಯಾ, ಎಎಸ್ ಚೆನ್ನಂಪಲ್ಲಿ ಇತರರು ಇದ್ದರು.
Leave a Comment