ಹೊನ್ನಾವರ ;
ಇತ್ತಿಚಿಗೆ ಅಕಾಲಿಕವಾಗಿ ಮೃತರಾದ ಪಟ್ಟಣದ ಬಂದರ ಬಳಿಯ ಶಿಕ್ಷಕಿ ಶಿಲ್ಪಾ ನಾರಾಯಣ ಮೇಸ್ತರವರ ಮನೆಗೆ ಭಟ್ಕಳ ಶಾಸಕ ಮಂಕಾಳ ವೈದ್ಯರವರು ಭೇಟಿನೀಡಿ ಪಾಲಕರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ತಿಳಿಸಿದರು. ನಾರಾಯಣ ಮೇಸ್ತರವರು ಶಾಸಕರ ಆತ್ಮೀಯರಾಗಿದ್ದು ಹೊನ್ನಾವರದ ಮೀನುವ್ಯಾಪಾರಿಯಾಗಿದ್ದಾರೆ. ಅವರ ಪುತ್ರಿ ಅಕಾಲಿಕ ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು. ತಂದೆ ನಾರಾಯಣ ಮೇಸ್ತ, ತಾಯಿ ಪಾರ್ವತಿ ಹಾಗೂ ಸಹೋದರ ಮಹೇಶರವರೊಂದಿಗೆ ಕೆಲಕಾಲ ಸಮಯ ಕಳೆದು ವಾಪಸ್ಸಾದರು. ಇ ಸಂಧರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕೃಷ್ಣ ಗೌಡ ,ಅವರ ಕುಟುಂಬದ ಸುರೇಶ ಬಿ ಖಾರ್ವಿ, ಉಪಾಧ್ಯಕ್ಷರು ಮಂಕಿ ಹಳೇಮಠ ಪಂಚಾಯತ, ದಾಮೋದರ ಮೇಸ್ತ, ವೆಂಕಟೇಶ ಮೇಸ್ತ ಹಾಗೂ ಕುಟಂಬದವರು ಉಪಸ್ಥಿತರಿದ್ದರು.
Leave a Comment