ಹಳಿಯಾಳ:- ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರ ರವರ ನಿರ್ದೇಶನದಂದತೆ 8 ಏಪ್ರಿಲ್ 2018 ಭಾನುವಾರದಂದು “ಮಿಂಚಿನ ನೋಂದಣಿ’ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಹಳಿಯಾಳ ತಹಶೀಲದಾರ ಎಮ್.ಎನ್ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿ.8 ರಂದು ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾರರ ನೋಂದಣಿ, ಬಿಟ್ಟು ಬಿಡತಕ್ಕವು, ತಿದ್ದುಪಡಿ ಹಾಗೂ ವರ್ಗಾವಣೆ ಕುರಿತು ನಮೂನೆ 6,7,8,8ಎ ಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ. “ಮಿಂಚಿನ ನೋಂದಣಿ’ ಅಭಿಯಾನವು ಈವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸದೇ ಇರುವ ಮತದಾರರು ಹಾಗೂ 18 ವರ್ಷ ಪೂರ್ಣಗೊಂಡ ಯುವ ಮತದಾರರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳ ಹತ್ತಿರ ಫಾರ್ಮ ನಂ 6 ನ್ನು ತುಂಬಿ ಅವಶ್ಯಕ ದಾಖಲೆಗಳನ್ನು ಪೂರೈಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿರುವ ಮಠದ ಅವರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಾ ಕಛೇರಿ ಹಳಿಯಾಳ ದೂರವಾಣಿ ಸಂಖ್ಯೆ:-08284-220134ನ್ನು ಸಂಪರ್ಕಿಸುವಂತೆ ಕೊರಿದ್ದಾರೆ.
Leave a Comment