ಹೊನ್ನಾವರ : ಉತ್ತರ ಕನ್ನಡದ ಜಾತ್ಯಾತೀತ ಕ್ಷೇತ್ರ ಎಂದು ಹೆಸರು ಗಳಿಸಿರುವ ಕುಮಟಾ ಹಾಲಕ್ಕಿ ಒಕ್ಕಲಿಗರು,ನಾಮಧಾರಿಗಳು ಹಾಗೂ ಹವ್ಯಕ ಬ್ರಾಹ್ಮಣ ಮತದಾರರು ಹೆಚ್ಚಾಗಿರುವ ಕ್ಷೇತ್ರ.
ಕಾಂಗ್ರೇಸ್ ಶಾರದಾ ಶೆಟ್ಟರಿಗೆ ಟಿಕೇಟ್ ನೀಡಿದರೆ ಬಿಜೆಪಿ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಜೆಡಿಎಸ್ ಪ್ರದೀಪ ನಾಯ್ಕ ಎಂಬ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರಿಗೆ ಟಿಕೇಟ್ ಘೋಷಿಸಿದೆ.
ಶಾರದಾ ಶೆಟ್ಟರು ತನ್ನ ಐದು ವರ್ಷದ ಸಾಧನೆಯನ್ನೇ ಮುಂದುವರೆಸಿಕೊಂಡು ಇನ್ನೊಂದು ಅವಕಾಶಕ್ಕೆ ಪ್ರಯತ್ನಿಸುತ್ತಿದ್ದರೆ, ಜೆಡಿಎಸ್ ನ ಪ್ರದೀಪ್ ನಾಯ್ಕರು ಒಕ್ಕಲಿಗರ ಮತವನ್ನು ನಂಬಿ ಫೀಲ್ಡಿಗಿಳಿದಿದ್ದಾರೆ. ಕುಮಾರಣ್ಣ , ದೇವೇಗೌಡರ ಆಶಿರ್ವಾದದಿಂದ ತಾನು ಗೆಲ್ಲುತ್ತೇನೆಂಬ ಭರವಸೆ ಅವರದು. ಆದರೆ “ಬಿ” ಫಾರ್ಮ ಬರುವವರೆಗೂ ಇದು ಖಚಿತವಲ್ಲ ಎಂದೂ ಜೆಡಿಎಸ್ ನ ಕೆಲವು ಆಕಾಂಕ್ಷಿಗಳು ಹೇಳುತ್ತಿದ್ದಾರೆ.
ಬಿಜೆಪಿ ನೆಚ್ಚಿಕೊಂಡಿರುವ ಕೆಲವು ಅಭ್ಯರ್ಥಿಗಳು ತಾವೇ ತೋಡಿದ ಗುಂಡಿಯಲ್ಲಿ ಬಿದ್ದಿದ್ದಾರೆ. ಜನರ ಮುಂದೆ ಇವರಿಗೆ ಮುಖ ತೋರಿಸುವುದು ಕಷ್ಟವಾಗಿದೆ. ಹಿಂದೆ ಭ್ರಷ್ಟಾಚಾರಿಗಳು, ಪಕ್ಷಾಂತರಿಗಳು ಹಾಗು ಜನರ ನಡುವೆ ಸಂಪರ್ಕ ಇಲ್ಲದವರೆಂದು ಕರೆಸಿಕೊಂಡ ಈ ಟಿಕೇಟ್ ಆಕಾಂಕ್ಷಿಗಳು ಪಕ್ಷದ ಗೌರವ ಹಾಗು ನಂಬಿಕೆಯನ್ನು ಜನರ ಮಧ್ಯೆ ಹಾಳು ಮಾಡಿದವರು.
ಶಾರದಾ ಶೆಟ್ಟರ ಬಳಿ ಸುಳಿಯುವ ಅನೇಕರು ಸಂದರ್ಭ ಸಾಧಕರೆಂದು ಹಲವರ ಆರೋಪ. ಪಕ್ಷದೊಳಗಿನ ಒಂದು ಗುಂಪು ಶಾರದಾ ಶೆಟ್ಟರಿಗೆ ಚುನಾವಣೆಯಲ್ಲಿ ಕೈಕೊಡಲು ಸಿದ್ದತೆ ನಡೆಸಿದೆ. ಇವರೆಲ್ಲಾ ನೀಡುವ ಕಾರಣ ಎಂದರೆ ಮಗ ರವಿ ಶೆಟ್ಟಿಯಾಗಿದೆ. ಏನೇ ಇದ್ದರು ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಘೋಷಿಸದ ಹೊರತು ಚುನಾವಣೆಯ ಚಿತ್ರಣ ಸ್ಪಷ್ಟವಾಗಲಾರದು. ಮುಂದಿನ ವಾರ ಅಭ್ಯರ್ಥಿಗಳ ಘೋಷಣೆಯ ನಂತರ ಸ್ಥಳೀಯ ಸ್ಥಿತಿಗತಿಯ ಕುರಿತು ವಿವರವಾಗಿ ಚರ್ಚಿಸಲಾಗುವುದು.
Yes, we need good candidate and support to save human being .yani we are expecting very young man Mr. Sunil naik sir get a ticket from bhatkal vidhansaba ksetrha, what we r expect it will be done from him. (Shri ram sketra bhatkal ).