• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾತಿನಂತೆ ನಡೆಯದೆ ಕುಮಾರಸ್ವಾಮಿ- ಜೆಡಿಎಸ್ ಮುಳುಗುವ ಹಡಗು- ಕುಮಾರಸ್ವಾಮಿ ಗೆಲ್ಲುವುದು ಸಂಶಯ – ಟಿ.ಆರ್.ಚಂದ್ರಶೇಖರ

April 15, 2018 by Yogaraj SK Leave a Comment

ಹಳಿಯಾಳ : ಜನರಿಗೆ, ನಿಷ್ಠಾವಂತ ಕಾರ್ಯಕರ್ತರು ಹಾಗೂ ನಾಯಕರಿಗೆ ಮೊಸ ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷ ಮುಳುಗುವ ಹಡಗಿನಂತಾಗಿದ್ದು ಕುಮಾರಸ್ವಾಮಿಯವರು ಗೆಲ್ಲುವುದು ಸಂಶಯ ಎಂದು ಹಳಿಯಾಳ ಪಕ್ಷೇತರ ಅಭ್ಯರ್ಥಿ  ಹಾಗೂ ನಿಕಟಪೂರ್ವ ಜೆಡಿಎಸ್ ಪಕ್ಷ ಹಿರಿಯ ಮುಖಂಡ ದಾಂಡೇಲಿಯ ಟಿ.ಆರ್.ಚಂದ್ರಶೇಖರ ಖಡಕ್ಕಾಗಿ ಹೇಳಿದರು.  ಹಳಿಯಾಳ ಪಟ್ಟಣದಲ್ಲಿ ಅವರ ಅಭಿಮಾನಿಗಳ ಕಾರ್ಯಾಲಯಕ್ಕೆ ಚಾಲನೆ ನೀಡಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಘೊಷಿತ ಅಭ್ಯರ್ಥಿ ಯಾರೆಂದು ಗೊತ್ತಿಲ್ಲ ಸ್ಥಳೀಯರಿಗೆ ಆದ್ಯತೆ ನೀಡುವ ಬದಲು ಹಣದ ವ್ಯವಹಾರದ ಮೂಲಕ ಅಭ್ಯರ್ಥಿ ಘೊಷಣೆ ಮಾಡಲಾಗಿದೆ ಎಂದು ಕ್ಷೇತ್ರದಲ್ಲಿ ಜಗಜ್ಜಾಹಿರಾಗಿದೆ ಎಂದರು.  ಕಳೆದ 44 ವರ್ಷಗಳಿಂದ ಯಾವುದೇ ಸ್ವಾರ್ಥ ಇಟ್ಟುಕೊಳ್ಳದೆ ತಾವು ದುಡಿದ ದುಡ್ಡಿನಲ್ಲಿ ಶೇ.60 ರಷ್ಟು ಭಾಗವನ್ನು ಸಮಾಜ ಸೇವೆಯಲ್ಲಿ ವಿನಿಯೋಗಿಸುತ್ತಾ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಕಳೆದ 13 ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರನ್ನು ಮಾಡುವ ಮಟ್ಟಿಗೆ ಕೆಲಸವನ್ನು ಮಾಡಿದ್ದೇವು ಎಂದ ಚಂದ್ರಶೇಖರ ಕಳೆದ ಕೆಲವು ತಿಂಗಳ ಹಿಂದೆ ಕುಮಾರಸ್ವಾಮಿಯವರು ಬೆಂಗಳೂರಿಗೆ ಕರೆದು ಹಳಿಯಾಳ ಕ್ಷೇತ್ರದ ಜವಾಬ್ದಾರಿ ನಿಮಗೆ ನೀಡುತ್ತಿದ್ದು ತಮ್ಮ ನಿರ್ಧಾರವೇ ಅಂತಿಮ ಹಾಗೂ ತಾವೇ ಅಭ್ಯರ್ಥಿಯಾಗಿ ಸ್ಪರ್ದಿಸುವಂತೆ ಕೊರಿದ್ದರು ಅಲ್ಲದೇ ಆ ದಿನ ಈಗಿನ ಘೊಷಿತ ಅಭ್ಯರ್ಥಿಯನ್ನು ಕುಮಾರಸ್ವಾಮಿಗೆ ಹಣ ನೀಡಿ ಟಿಕೆಟ್ ಪಡೆಯುತ್ತೀಯಾ ನೀನು ಏನೆಂದುಕೊಂಡಿದ್ದಿಯಾ ಎಂದು ಜೊರು ಮಾಡಿ ಹೊರ ನಡೆಯುವಂತೆ ಖಡಕ್ ಆಗಿ ನುಡಿದಿದ್ದ ಕುಮಾರಸ್ವಾಮಿ ಯಾವ ಆಮಿಶಕ್ಕೆ ಒಳಗಾಗಿ ಅವರಿಗೆ ಟಿಕೆಟ್ ನೀಡಿದರು ಎಂದು ಜನತೆಗೆ ತಿಳಿಸಲಿ ಎಂದು ಕಿಡಿ ಕಾರಿದ ಅವರು ತಮಗಷ್ಟೆ ಅಲ್ಲದೇ ಇತರ ಹಲವಾರು ಜೆಡಿಎಸ್‍ನ ನಿಷ್ಠಾವಂತ ಶಾಸಕರು,  ಮುಖಂಡರು ಹಾಗೂ ಕಾರ್ಯಕರ್ತರಿಗೆ ಕುಮಾರಸ್ವಾಮಿ ವಿಶ್ವಾಸದ್ರೋಹ ಬಗೆದಿದ್ದು ಅವರಿಂದ ಎಲ್ಲರೂ ದೂರವಾಗುತ್ತಿರುವುದು  ಈಗ ಜೆಡಿಎಸ್ ನೆಲಕಚ್ಚುತ್ತಿದ್ದು ಸದ್ಯದಲ್ಲೇ ಜೆಡಿಎಸ್ ಹಡಗು ಮುಳುಗಲಿದೆ ಎಂದರು.  ಕುಮಾರಸ್ವಾಮಿಯವರು ಮೊಸ ಮಾಡಿರುವುದನ್ನು ಅರಿತ ಕ್ಷೇತ್ರದ ತಮ್ಮ ಅಭಿಮಾನಿಗಳು ಚುನಾವಣೆಗೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸುವಂತೆ ಒತ್ತಾಯಿಸಿದ್ದರಿಂದ ತಾವು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಘೊಷಿಸಿದರು.  ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಭೆಟಿ ನೀಡಲಾಗಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು  ದಾಖಲೆ ಮತ ಪಡೆದು ತಾವು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಟಿಆರ್ ಚಂದ್ರಶೇಖರ ಕ್ಷೇತ್ರದಲ್ಲಿ ನಮಗ್ಯಾರು ಶತ್ರುವಿಲ್ಲ ಎಲ್ಲರ ಬಗ್ಗೆ ತಮಗೆ ಅಭಿಮಾನವಿದೆ ಆದರೇ ತಾವು ಯಾರ ಜೊತೆಯು ಕೈ ಜೊಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಈಗಿನ ಜೆಡಿಎಸ್ ಪಕ್ಷದ ಘೊಷಿತ ಅಭ್ಯರ್ಥಿ ಪರ ಯಾರಿಲ್ಲ ಎಲ್ಲರೂ ಜೆಡಿಎಸ್‍ನಿಂದ ಹೊರ ಬರುತ್ತಿದ್ದು ಕ್ಷೇತ್ರದಲ್ಲಿ ಅವರು ಹಿನಾಯ ಸೊಲು ಅನುಭವಿಸಲಿದ್ದಾರೆ ಅಲ್ಲದೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹೆಸರು ಇಲ್ಲದಂತಾಗಲಿದೆ ಎಂದು ಕಿಡಿ ಕಾರಿದರು.  ಈ ಸಂದರ್ಭದಲ್ಲಿ ಮುಖಂಡರಾದ ಕೈತಾನ ಬಾರಬೋಜಾ, ದಾವಲಸಾಬ ಅಂಗಡಿ, ಎಸ್.ಜಿ.ಬಿರಾದಾರ, ಬಡೇಸಾಬ ಕಕ್ಕೇರಿ, ಬಸವರಾಜ ಶಾಬಾದಿ, ಪ್ರಭಾಕರ ಶೆಟ್ಟಿ, ಸುಭಾಷ, ಈರಪ್ಪಾ, ಶೋಭಾ ಕೊಳದಾರ, ಶಾಲಂಬಿ ಹಳಬ, ವಿಷಯಾಂತಿ ಸಿದ್ದಿ, ಮಹೇಶ ಇತರರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಕುಮಾರಸ್ವಾಮಿ, ಗೆಲ್ಲುವುದು ಸಂಶಯ, ಜನರಿಗೆ, ಜೆಡಿಎಸ್ ಮುಳುಗುವ ಹಡಗು, ಟಿ.ಆರ್.ಚಂದ್ರಶೇಖರ, ನಿಷ್ಠಾವಂತ ಕಾರ್ಯಕರ್ತರು, ಮಾತಿನಂತೆ ನಡೆಯದೆ ಕುಮಾರಸ್ವಾಮಿ-, ಹಣದ ವ್ಯವಹಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar