ಹಳಿಯಾಳ:- ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನದ ಹೊಳೆಯನ್ನೇ ಹರಿಸಲಾಗಿದ್ದು ಮತ್ತೇ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಹಳಿಯಾಳ ಗುರುತಿಲ್ಪಡಲಿದ್ದು ಇದಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ನುಡಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಹಿರಿಯ ರಾಜಕಾರಣಿ ಸಚಿವ ದೇಶಪಾಂಡೆ ಅವರು ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ತಮ್ಮನ್ನು ಮತ್ತೆ ಬೆಂಬಲಿಸಿ ಅಭಿವೃದ್ದಿ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಸಚಿವರ ಪುತ್ರ ಪ್ರಶಾಂತ ದೇಶಪಾಂಡೆ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಜಿಪಂ ಸದಸ್ಯರಾದ ಮಹೇಶ್ರಿ ಮಿಶಾಳೆ, ಲಕ್ಷ್ಮೀ ಕೊರ್ವೆಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ತಾಪಂ, ಗ್ರಾಪಂ ಸದಸ್ಯರು, ಅಧ್ಯಕ್ಷರುಗಳು ಪ್ರಮುಖರು ದೇಶಪಾಂಡೆ ಅವರಿಗೆ ಪ್ರಚಾರದಲ್ಲಿ ಸಾಥ್ ನೀಡುತ್ತಿದ್ದಾರೆ.
how many decade will he take to make ideal Haliyal… ?
he should think about his past 40 years of his govt.
worthless speech…?