ಹಳಿಯಾಳ:- ರಾಷ್ಟ್ರಮಟ್ಟದಲ್ಲೇ ಮಾದರಿ ತರಬೇತಿ ಸಂಸ್ಥೆಯಾಗಿ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಮಡೆ ಆರ್‍ಸೆಟಿ 2016-17 ಸಾಲಿನಲ್ಲಿ ‘ಉತ್ತಮ ಕಾರ್ಯನಿರ್ವಹಣೆಗಾಗಿ’ ದೇಶದಲ್ಲಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಕೆನರಾ ಬ್ಯಾಂಕ್ ಆರ್‍ಸೆಟಿ ನಿರ್ದೇಶಕ ಎನ್. ಆರ್. ವೈದ್ಯ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಗ್ರಾಮೀಣ ಭಾಗಗಳು ಪ್ರಕಾಶಿಸಬೇಕು ಅರ್ಥಾತ್ ಗ್ರಾಮೀಣ ಭಾಗದ ಜನತೆ ಪ್ರಕಾಶಿಸಬೇಕು. ಆಗ ದೇಶ ಪ್ರಕಾಶಿಸುತ್ತದೆ ಎಂಬ ಧ್ಯೇಯೋದ್ಧೇಶದೊಂದಿಗೆ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ (ಒoಖಆ) ಗುರುತಿಸಿಕೊಂಡಿರುವ ನ್ಯಾಶನಲ್ ಸೆಂಟರ್ ಫಾರ್ ಎಕ್ಸಲೆನ್ಸ ಆಫ್ ಆರ್‍ಸೆಟಿ (ಓಂಅಇಖ) ಮಾರ್ಗದರ್ಶನದಂತೆ ಗ್ರಾಮೀಣ ಯುವಕ-ಯುವತಿಯರಿಗೆ ಉಚಿತ ಊಟ-ವಸತಿಯೊಂದಿಗೆ 583 ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳು ವಿವಿಧ ಪ್ರತಿಷ್ಠಿತ ಬ್ಯಾಂಕಿನ ಸಹಕಾರದೊಂದಿಗೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಹಳಿಯಾಳದ ಆರ್‍ಸೆಟಿ ಕೂಡ ಒಂದಾಗಿದೆ ಎಂದಿದ್ದಾರೆ. ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಯವಹಿಸುತ್ತಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯು ಹಳಿಯಾಳದಲ್ಲಿ 2004 ರಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಚಟುವಟಿಕೆಗಳಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಇಲ್ಲಿಯವರೆಗೆ ಸುಮಾರು 18281 ಯುವಕ-ಯುವತಿಯರಿಗೆ ವಿವಿಧ ಸ್ವ-ಉದ್ಯೋಗದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗಿದೆ. ಅದರಲ್ಲಿ 13528 ಶಿಬಿರಾರ್ಥಿಗಳು ಸ್ವ-ಉದ್ಯೋಗ ಹಾಗೂ ವೇತನ ಆಧಾರಿತ ನೌಕರಿಯಲ್ಲಿ ನಿರತರಾಗಿದ್ದಾರೆ. ಸುಮಾರು 5713 ಶಿಬಿರಾರ್ಥಿಗಳು ವಿವಿಧ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವ-ಉದ್ಯೋಗ ಪ್ರಾರಂಭಿಸಿದ್ದಾರೆಂದು ವೈದ್ಯ ವಿವರಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ ನಡೆಸಲ್ಪಡುವ ‘ಆರ್ ಸೆಟಿ ದಿವಸ’ ಕಾರ್ಯಕ್ರಮದಲ್ಲಿ ವಿರೇಂದ್ರ ಹೆಗ್ಗಡೆಯವರು ಹಾಗೂ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಸತತವಾಗಿ 2013-14, 2014-15, 2015-16 ಹಾಗೂ 2016-17 ಸಾಲಿಗೆ ರಾಷ್ಟ್ರ ಮಟ್ಟದಲ್ಲಿಯೇ ‘ಎಎ’ ಗ್ರೇಡ್ ಸಾಧನೆಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ 2013-14 ರಲ್ಲಿ ದ್ವಿತೀಯ ಸ್ಥಾನ, 2014-15 ರಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ಎಲ್ಲ ಆರ್‍ಸೆಟಿ ಗಳಿಗಿಂತ ಮುಂಚೂಣಿಯಲ್ಲಿ ಕಾರ್ಯ ಸಾಧಿಸಿ ಪ್ರಥಮ ಸ್ಥಾನ ಪಡೆದಿದೆ. ಅಲ್ಲದೇ ಈಗ ಮೇ 5 ರಂದು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ ಅಜೀವಿಕಾ ಮತ್ತು ಕೌಶಲ್ಯ ವಿಕಾಸ ಮೇಳಾದಲ್ಲಿ ಕೇಂದ್ರ ಸರಕಾರದ ಗ್ರಾಮೀಣ ವಿಕಾಸ, ಪಂಜಾಯತ್ ರಾಜ್ ಹಾಗೂ ಗಣಿ ಮಂತ್ರಾಲಯದ ಸಚಿವರಾದ ನರೇಂದ್ರಸಿಂಘ ಥೋಮರ್ ಹಾಗೂ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ರಘುಬರದಾಸ್ ಸಮ್ಮುಖದಲ್ಲಿ 2016-17 ಸಾಲಿನಲ್ಲಿ ‘ಉತ್ತಮ ಕಾರ್ಯನಿರ್ವಹಣೆಗಾಗಿ’ ದೇಶದಲ್ಲಯೇ ದ್ವಿತೀಯ ಸ್ಥಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Leave a Comment