ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣವನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದ್ದು ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಳಿಯಾಳ ತಾಲೂಕಾ ಘಕಟದ ಅಧ್ಯಕ್ಷ ಶಂಕರ ಕಾಜಗಾರ ಆರೋಪಿಸಿದ್ದಾರೆ. ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕಳೆದ ವರ್ಷದ 305ರೂ ಬಾಕಿ ಹಣ ಹಾಗೂ 2017-18ನೇ ಸಾಲಿಗೆ ಕಾರ್ಖಾನೆಗೆ ಕಳುಹಿಸಿದ ಕಬ್ಬಿನ ಹಣವನ್ನು ಎಪ್ರಿಲ್ 30 ರ ಒಳಗೆ ರೈತರಿಗೆ ನೀಡುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದ ಕಾರ್ಖಾನೆ ಅಧಿಕಾರಿಗಳು ಫೆಬ್ರವರಿ ಕೊನೆಯಲ್ಲಿ ಮೊದಲ ಕಂತನ್ನು ಮಾತ್ರ ನೀಡಿದ್ದು ಈವರೆಗೆ ಉಳಿದ ಹಣವನ್ನು ರೈತರಿಗೆ ನೀಡದೆ ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತನಿಗೆ ಪರೋಕ್ಷವಾಗಿ ಆರ್ಥಿಕವಾಗಿ ಸಂಕಷ್ಟದ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಬೆಳೆಯ ಹಣ ಬಾರದೆ ಇರುವುದರಿಂದ ಅನೇಕ ರೈತರು ಬ್ಯಾಂಕ್, ಸಹಕಾರಿ ಸಂಘಗಳಲ್ಲಿ ಹಣ ಭರಣ ಮಾಡಲಾಗದೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಅವರು ಕಾರ್ಖಾನೆಗೆ ನಿರ್ದೇಶನ ನೀಡಿದರು ಕಾರ್ಖಾನೆಯವರು ಮಾತ್ರ ಜಿಲ್ಲಾಡಳಿತಕ್ಕೂ ಗೌರವ ನೀಡದೆ ದರ್ಪದಿಂದ ವರ್ತಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಯನ್ನು ಪರಿಹರಿಸದೆ ಇದ್ದಲ್ಲಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ ನಡೆಸಲಾಗವುದು ಎಂದು ಕಬ್ಬು ಬೆಳೆಗಾರ ಸಂಘದವರು ಎಚ್ಚರಿಕೆ ನಿಡಿದ್ದಾರೆ. ಸದ್ಯದಲ್ಲೆ ಈ ಕುರಿತು ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ವಿ ಘಾಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಜಯರಾಮ ಕಳ್ಳಿಮನಿ, ಲಕ್ಷ್ಮಣ, ಸುರೇಶ ಶಿವಣ್ಣವರ, ಪುಂಡ್ಲಿಕ ಶಿಂಧೆ, ಸಾತುರಿ ಗೋಡಿಮನಿ ಸೇರಿದಂತೆ ಮೊದಲಾದ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿ ಪ್ರತಿಭಟನೆಯ ಕುರಿತು ತೀರ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.

Leave a Comment