• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ

May 10, 2018 by Gaju Gokarna Leave a Comment

ಹೊನ್ನಾವರ : ರಾಜಕಾರಣ ಎನ್ನುವುದು ಬರುತ್ತೆ ಹೋಗುತ್ತೆ ಹಲವು ಬುಡವಿಲ್ಲದ ಬೇರುಗಳು ಪ್ರತ್ಯಕ್ಷವಾಗುತ್ತದೆ. ಇದು ರಾಜಕಾರಣ ಅಲ್ಲ, ಹಿಂದೂ ಧರ್ಮದ ರಕ್ಷಣೆ ಆಗಬೇಕು. ಕಾಂಗ್ರೆಸ್ ಇದು ಕೆಟ್ಟ ಪರಂಪರೆ ಹಾಗೂ ಕೆಟ್ಟ ಸ್ವಭಾವ. ದೇಶ ವಿಭಜಿಸಿ ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಪಟ್ಟಣದ ದುರ್ಗಾಕೇರಿ ದಂಡಿನದುರ್ಗಾ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮಹಿಳಾ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಬೋಲೋ ಭಾರತ ಮಾತಾಕೀ, ಮೋದಿ ಮೋದಿ ಎಂದು ಜೈಕಾರ ಹಾಕುತ್ತಾ ಮೇರವಣಿಗೆ ಪಟ್ಟಣದ ಬಾಜಾರ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಭರ್ಜರಿ ರೋಡ್ ಶೋ ನಡೆಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಶರಾವತಿ ವೃತ್ತದ ಬಳಿ ಮೇರವಣಿಗೆ ಮುಗಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಾತನಾಡಿ ಹಿಂದೂತ್ವವೇ ನಮಗೆ ಆಧಾರ. ನಮ್ಮ ಬದುಕು ಸಂಸ್ಕ್ರತಿ, ಸಂಸ್ಕಾರದ ಕೇಂದ್ರ. ಇಲ್ಲಿ ಕೆಲವರು ಹಿಂದೂತ್ವದ ಬಗ್ಗೆ ಅರಿವಿಲ್ಲದೇ ಢೋಂಗಿತನ ಮತ್ತು ಖೋಟಾ ಹಿಂದುವಾದವನ್ನು ಪ್ರದರ್ಶಿಸುತ್ತಿದ್ದಾರೆ. ಧರ್ಮಕ್ಕೋಸ್ಕರವೇ ಬದುಕಬೇಕು, ಧರ್ಮಕ್ಕೋಸ್ಕರವೇ ರಾಜಕಾರಣ ಮಾಡಬೇಕು ಅದನ್ನು ಬದುಕಿನಲ್ಲಿ ತೋರಿಸಿಕೊಡಬೇಕು. ನಮ್ಮ ಬದುಕು ನಾಲ್ಕು ಜನರ ಎದುರು ತಲೆ ಎತ್ತಿ ನಿಲ್ಲುವಂತಾಗಬೇಕು. ಮತವನ್ನು ಹಣಕ್ಕೇ ಮಾರಿಕೊಳ್ಳಬೇಡಿ. 70 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಸರಾಯಿಕೊಟ್ಟು ಮಲಗಿಸಿದೆ, ಇದು ಅವರ ಪಾಪದ ಫಲ, ಇನ್ನು ನೀವು ಎಚ್ಚರಗೊಳ್ಳದಿದ್ದಲ್ಲಿ ನಿಮಗೆ ಉಳಿಗಾಲವಿಲ್ಲ ಎಂದರು.
ಅವರು ತಾಲೂಕಿನ ಎಲ್ಲಾ ಮತದಾರರಲ್ಲಿ ಈ ಬಾರಿ ನನ್ನನ್ನು ಗೆಲ್ಲಿಸಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಮತಯಾಚಿಸಿ ಮಾತನಾಡಿದರು. ರೋಡ್ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾ ಅದ್ಯಕ್ಷ ಸುಬ್ರಾಯ ನಾಯ್ಕ, ಲೋಕೇಶ ಮೇಸ್ತ, ಉಮೇಶ ನಾಯ್ಕ, ಗಣೇಶ ಪೈ ,ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರೀ, ವಿಜು ಕಾಮತ್, ಉಮೇಶ ಸಾರಂಗ, ಕಮಲಾಕರ ಮೇಸ್ತ, ರುಕ್ಮಾಬಾಯಿ ಮೇಸ್ತ, ರಾಜೇಶ ಭಂಡಾರಿ, ಸುಬ್ರಹ್ಮಣ್ಯ ಶಾಸ್ತ್ರೀ, ಎಮ್.ಎಸ್.ಹೆಗಡೆ ಮತ್ತು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

10 hnr 03 d k shetty.2

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: ಈ ಭ್ರಷ್ಟ ಸರ್ಕಾರವನ್ನು, ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ, ಜಾತಿ ಜಾತಿಗಳ ಮದ್ಯೆ, ದಿನಕರಶೆಟ್ಟಿ, ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...