ಹಳಿಯಾಳ:- ಹಳಿಯಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 11.30 ಗಂಟೆಗೆ ಕುಟುಂಬದೊಡಣೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆಯಲ್ಲಿ ಪತ್ನಿ ಸುವರ್ಣಾ ಹೆಡಗೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಹಾಗೂ ಪತ್ನಿ ಸುನಿತಾ ಹೆಗಡೆ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಕ್ಷೇತ್ರದಲ್ಲಿ ಬದಲಾವಣೆ ಮಾಡಲೇಬೇಕು ಮೋದಿಜಿಯವರ ಕೈ ಬಲ ಪಡಿಸಬೇಕು ಬಿಜೆಪಿ ಪಕ್ಷದಿಂದಲೇ ಅಭಿವೃದ್ದಿ ಸಾಧ್ಯ ಎಂದು ಅರಿತಿರುವ ಮತದಾರ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವುದು ಶತಸಿದ್ದವಾಗಿದ್ದು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಭವಿಷ್ಯ ನುಡಿದರು.
Leave a Comment