ಹಳಿಯಾಳ:- ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೇಸ್ನ ಸಚಿವ ಆರ್.ವಿ.ದೇಶಪಾಂಡೆ 8ನೇ ಬಾರಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಜೆ ಹಳಿಯಾಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹಾಗೂ ಅಪಾರ ಬೆಂಬಲಿಗರು, ಮುಖಂಡರೊಂದಿಗೆ ಪಟ್ಟಣಕ್ಕೆ ಆಗಮಿಸಿದ ಸಚಿವ ಆರ್.ವಿ.ದೇಶಪಾಂಡೆ ಅವರು ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದಾಗ ನೂರಾರು ಕಾರ್ಯಕರ್ತರು ಅವರನ್ನು ಗುಲಾಲು ಎರಚಿ, ಪಟಾಕಿ ಸಿಡಿಸಿ, ಮಾಲೆ ಹಾಕಿ ಸ್ವಾಗತ ಕೊರಿದರೇ ಅವರ ಪತ್ನಿ ರಾಧಾಬಾಯಿ ಅವರು ಆರತಿ ಬೆಳಗಿ ಅವರನ್ನು ಬರಮಾಡಿಕೊಂಡರು. ಬಳಿಕ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ಸಲ್ಲಿಸಿದ ದೇಶಪಾಂಡೆ ಅವರು ಬೆಂಗಳೂರಿನಿಂದ ಹೈಕಮಾಂಡ ಕರೆ ಬಂದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿಗೆ ದೌಡಾಯಿಸಿದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ ಮಾಡಲಾಗಿದ್ದು ಸೋತ ಸಮಿಪಸ್ಪರ್ದಿ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಕೆಲವು ಪ್ರಮುಖ ಮುಖಂಡರುಗಳ ಮನೆಗೆ ಬೀಗಿ ಪೋಲಿಸ್ ಬಂದೊಬಸ್ತ ನಿಯೋಜಿಸಲಾಗಿದೆ
Leave a Comment