ಹಳಿಯಾಳ:- ಪಟ್ಟಣದಲ್ಲಿ ಸಾಯಂಕಾಲ 4-5 ಗಂಟೆ ಆಗುತ್ತಿದ್ದಂತೆ ಭಾರಿ ಬಿರುಗಾಳಿ, ಗುಡುಗುತ್ತಾ ಮಳೆಯಾಗುತ್ತಿದೆ ಕಳೆದ ಮೇ.4ರಿಂದ ಈ ರೀತಿಯ ವಾತಾವರಣ ಹಳಿಯಾಳದಲ್ಲಿ ಕಂಡು ಬರುತ್ತಿದೆ. ಬುಧವಾರ ಹಾಗೂ ಗುರುವಾರವು ಮಳೆ ಅಬ್ಬರ ಮುಂದುವರೆದಿದ್ದು ಕಳೆದ 2-3 ದಿನಗಳಿಂದ ಸಾಯಂಕಾಲ ಆಗುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಬಿಸುತ್ತಿದ್ದು ಜನಜೀವನ ಅಸ್ತವ್ಯಸ್ಥ ಆಗುತ್ತಿದೆ. ಭಾರಿ ಬಿರುಗಾಳಿಯ ಕಾರಣ ಪಟ್ಟಣದಲ್ಲಿ ಹೆಚ್ಚಿನ ಕಾಲ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು ವಿದ್ಯುತ್ ಕಡಿತದ ಸಮಸ್ಯೆ ಎದುರಾಗುತ್ತಿದೆ. ಭಾರಿ ಬಿರುಗಾಳಿಯ ಅಬ್ಬರಕ್ಕೆ ಈವರೆಗೆ ಸುಮಾರು 2ಕೋಟಿ ರೂ.ಗೂ ಅಧಿಕ ಬೆಲೆಯ ಮಾವಿನ ಫಸಲು ನೆಲಕ್ಕುರುಳಿ ನಾಶವಾಗಿದ್ದು ತೊಟಗಾರರು, ರೈತರಿಗೆ ಭಾರಿ ನಷ್ಟ ಉಂಟುಮಾಡಿದೆ. ಅಲ್ಲದೇ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿ ಜನಜೀವನಕ್ಕೆ ತೊಂದರೆಯು ಉಂಟಾಗಿದೆ. ಮಳೆಯ ಅಬ್ಬರವು ಮುಂದುವರೆದಿದ್ದು ಸಾಯಂಕಲಾ ಸಮಯದಲ್ಲಿ ಭಾರಿ ಬಿರುಗಾಳಿ, ಗುಡುಗು, ಸಿಡಿಲಿನಿಂದ ಕೂಡಿ ಮಳೆಯಾಗುತ್ತಿದೆ. ಗುರುವಾರ ಸಾಯಂಕಾಲದಿಂದ ಭಾರಿ ಬಿರುಗಾಳಿಯೊಂದಿಗೆ ಮಳೆಯಾದ ಕಾರಣ ಹಲವೆಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ
Leave a Comment