ಹೊನ್ನಾವರ: ಒಕ್ಕಲಿಗ ಯುವ ವೇದಿಕೆ ಹಾಗೂÀ ಗ್ರಾಮ ಸಮಿತಿ ಗುಣವಂತೆ ಇವರ ಸಂಯುಕ್ತ ಆಶ್ರಯದಲ್ಲಿ ಎಸ್. ಎಸ್.ಎಲ್,ಸಿ ಪಿಯುಸಿ ನಂತರ ಮುಂದೆ ಇರುವ ಅವಕಾಶಗಳ ಕುರಿತ ಒಂದು ದಿನದ ಕಾರ್ಯಗಾರ ಗುಣವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಡಾಕ್ಟರ್ ಸತೀಶ ಶೇಟ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶೈಕ್ಷಣಿÉಕ ಮಾಹಿತಿ ಒದಗಿಸುವ ಅನೇಕ ಕಾರ್ಯಕ್ರಮಗಳು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತದೆ ಆದರೆ ಹಿಂದೆ ಈ ಸೌಲಭ್ಯವಿರಲಿಲ್ಲ. ಈ ಭಾಗದ ವಿಧ್ಯಾರ್ಥಿಗಳಿಗೆ ತಮ್ಮ ಅಮೂಲ್ಯ ಜೀವನ ರೂಪಿಸಿಕೊಳ್ಳಲು ಎಸ್‍ಎಸ್‍ಎಲ್‍ಸಿ, ಪಿಯುಸಿ ನಂತರ ಇರುವ ಅವಕಾಶ ಕುರಿತು ಮಾಹಿತಿಯನ್ನು ನೀಡಲು ಗುಣವಂತೆಯಂತಹ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಒಕ್ಕಲಿಗ ವೇದಿಕೆಯವರು ವಿದ್ಯಾರ್ಥಿಗಳಿಗೆ ಅನೂಕೂಲತೆಯನ್ನು ಕಲ್ಪಿಸಿದರು. ಇಂತಹ ಕಾರ್ಯಕ್ರಮದ ಉಪಯೋಗನ್ನು ಪಡೆದುಕೊಂಡು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು,
ಪಾಲಕರಾದ ಗೋಪಾಲ ನಾಯ್ಕ ಮಾತನಾಡಿ ನಮ್ಮ ಮಕ್ಕಳಿಗೆ ಮುಂದಿನ ವಿದ್ಯಾಬ್ಯಾಸಕ್ಕೆ ಅನೂಕೂಲವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಸಂತೋಷದಾಯಕವಾದದ್ದು. ಗ್ರಾಮೀಣ ಭಾಗದಲ್ಲಿದಲ್ಲಿರುವ ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಮುಂದಿನ ಪರಿಕ್ಷೇಗಳಿಗೆ ಸಿದ್ದವಾಗಲೂ ತರಬೇತಿ ನೀಡುವಂತಹ ಈ ಕಾರ್ಯಕ್ರಮ ನಿಜಕ್ಕೂ ಪ್ರಶಂಸನಾರ್ಹವಾದದ್ದು. ಎಲ್ಲಾ ಪಾಲಕರ ಪೋಷಕರ ಪರವಾಗಿ ನಾನು ಅಭಿನಂದಿಸುತ್ತೆನೆ ಎಂದರು.
ಕಾರ್ಯಕ್ರಮದ ಆಯೋಜನೆಯ ಕುರಿತು ಶಿಕ್ಷಕರಾದ ಎಸ್.ಎಚ್.ಗೌಡ ಮಾತನಾಡಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಮ್ಮ ವೇದಿಕೆಯ ವತಿಯಿಂದ ನಾವು ಅನೇಕ ಕಾರ್ಯಕ್ರಮ ಆಯೋಜನೆ ಮಾಡಿದರೂ ಸರಳವಾಗಿರುತ್ತದೆ ನಮ್ಮ ಉದ್ದೇಶ ಆಡಂಬರದ ಕಾರ್ಯಕ್ರಮದಿಂದ ಸರಳತೆಯಿಂದ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳುವಂತೆ ಆಗಿ ಆ ಮೂಲಕ ವಿದ್ಯಾರ್ಥಿಗಳಿಗೆ ಅನೂಕೂಲವಾಗಲಿ ಎಂಬ ಉದ್ದೇಶ ನಮ್ಮದು. ಪಟ್ಟಣ ಪ್ರದೇಶದಲ್ಲಿ ಇಂತಹ ಹಲವಾರು ಕಾರ್ಯಕ್ರಮದ ಮೂಲಕ ವಿಧ್ಯಾರ್ಥಿಗಳು ಸಾಧನೆ ಮಾಡುತ್ತಾರೆ ಆದರೆ ಗ್ರಾಮೀಣ ಭಾಗದಲ್ಲಿ ವಾಸಿಸುವ ವಿದ್ಯಾರ್ಥಿಗಳು ಸಾಧನೆ ಮಾಡುವ ಉದ್ದೇಶದಿಂದ ನಾವು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಗ್ರಾಮಿಣ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳಿವೆ ಆ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡಿದ್ದೇ ಆದರೆ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.
.
ವೇದಿಕೆಯಲ್ಲಿ ಬ್ಯಾಂಕ್ ಉದ್ಯೋಗಿ ಹಾಗೂ ತರಬೇತುದಾರಾದ ಕುಮಾರಿ ಸೋನಾಲಿ ಉಪಸ್ದಿತರಿದ್ದರು. ನಂತರ ವಿವಿಧ ಕ್ಷೇತ್ರದ ಪರಿಣಿತರಿಂದ ತರಬೇತಿ ಕಾರ್ಯಗಾರ ನಡೆಯಿತು.
35 ಕ್ಕೂ ಅಧಿಕ ವಿಧ್ಯಾರ್ಥಿಗಳು ತರಬೇತಿ ಭಾಗವಹಿಸಿ ಪ್ರಯೋಜನ ಪಡೆದರು. ಶಿಕ್ಷಕರಾದ ಶ್ರೀಕಾಂತ ಗೌಡ ಸ್ವಾಗತಿಸಿದರು. ಎಸ್.ಎಚ್.ಗೌಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Leave a Comment