ಹೊನ್ನಾವರ : ರಾಜ್ಯದಲ್ಲಿ ಕಾಂಗ್ರೇಸ್-ಜೆ.ಡಿ.ಎಸ್. ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹೊನ್ನಾವರದಲ್ಲಿ ಕಾಂಗ್ರೇಸ್ ಕಾರ್ಯಕರ್ತರು, ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರ ನೇತೃತ್ವದಲ್ಲಿ ಸಭೆ ನಡೆಸಿ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ. ನೂತನ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಸಮ್ಮೀಶ್ರ ಸರಕಾರ ಕುಮಾರಸ್ವಾಮಿ ನೇತೃತ್ವದಲ್ಲಿ ಮುಂದಿನ ಐದು ವರುಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದೇ ಸಾಗಿ ರಾಜ್ಯದ ಜನತೆಗೆ ಸುಭದ್ರ, ಸ್ಥಿರ ಸರಕಾರ ನೀಡುವ ಮೂಲಕ ನಾಡಿನ ಜನತೆಗೆ ಉತ್ತಮ ಆಡಳಿತ ನೀಡಲಿ ಎಂದು ಹಾರೈಸಿದರು. ನಂತರ ಕಾಂಗ್ರೇಸ್ ಕಾರ್ಯಕರ್ತರು ಶರಾವತಿ ಸರ್ಕಲ್ಗೆ ತೆರಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ವಿನಾಯಕ ಶೇಟ್, ದಾಮೋದರ ನಾಯ್ಕ, ಲಂಬೋದರ ನಾಯ್ಕ, ಜಕ್ರಿಯಾ ಜೋಗಮಠ್, ಮೋಹನ ಮೇಸ್ತ, ಮಂಜುನಾಥ ಖಾರ್ವಿ, ಶ್ರೀಕಾಂತ ಮೇಸ್ತ, ನೆಲ್ಸನ್ ರೋಡ್ರಿಗೀಸ್, ನವೋದಯ ಸುರೇಶ, ನಾಗರಾಜ ಮೇಸ್ತ, ಮೂಸಾ ಅಣ್ಣಿಗೇರಿ, ಸಂತೋಷ ಉದ್ಯಮನಗರ, ನಾರಾಯಣ ಮಹಾಲೆ, ತುಳಸಿದಾಸ ಪುಲ್ಕರ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Leave a Comment