ಹಳಿಯಾಳ:- ಹಳಿಯಾಳದಲ್ಲಿ ಎಲ್ಲಿಯೂ ಯಾವುದೇ ಗೋ ವಧಾಲಯ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಮಾಜಿ ಶಾಸಕ ಸುನೀಲ್ ಹೆಗಡೆ ತಾಕತ್ತಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು “ಆಮ್ನೆ ಸಾಮ್ನೆ”(ಎದುರು-ಬದುರು) ಚರ್ಚೆ ಮಾಡಲಿ ಹೊರತು ಹೇಳಿಕೆ ಕೊಡುವುದನ್ನು ಬಿಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್ ತಳವಾರ ಸವಾಲ್ ಎಸೆದಿದ್ದಾರೆ. ಪಟ್ಟಣದ ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸುನೀಲ್ ಹೆಗಡೆ ನೀಡಿದ ಪತ್ರಿಕಾ ಹೇಳಿಕೆಗಳಿಗೆ ಆಕ್ರೋಶದಿಂದ ಪ್ರತ್ಯುತ್ತರ ನೀಡುತ್ತಾ ಪುರಸಭೆಯಲ್ಲಿ ಸದಸ್ಯರು ದಲಾಲಗಿರಿ ಮಾಡುತ್ತಿದ್ದಾರೆಂದು ಹೆಗಡೆ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಹೆಗಡೆ ಸದಸ್ಯರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದರು. ಈ ಹಿಂದೆ ನೀವು ಹಾಗೂ ನಿಮ್ಮ ತಂದೆ ವಿಡಿ ಹೆಗಡೆ ಅವರು ಇಲ್ಲಿ ಕಾರ್ಯನಿರ್ವಹಿಸಿದ್ದು ಅವರು ದಲಾಲಗಿರಿ ಮಾಡಿದ್ದರೇ ಎಂದು ಕಿಡಿ ಕಾರಿದ ತಳವಾರ 2002ರಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾಗಿದ್ದ ಸುನೀಲ್ ಹೆಗಡೆ ಎರಡೂವರೆ ವರ್ಷ ಅಧಿಕಾರ ಮಾಡಿ ಬಳಿಕ ಪೂರ್ಣ ಅವಧಿ ಸದಸ್ಯರಾಗಿ ಇರದೆ ಅರ್ಧಕ್ಕೆ ರಾಜಿನಾಮೆ ನೀಡಿ ಹೋದ ಹೆಗಡೆಗೆ ಪುರಸಭೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದರು. ಚುನಾವಣೆ ಸೋತಿರುವ ಹಾಗೂ ಹಳಿಯಾಳ ಪಟ್ಟಣದಲ್ಲಿ ಕಡಿಮೆ ಮತ ಗಳಿಸಿರುವ ಅವರಿಗೆ ಪುರಸಭೆಯ ಬಗ್ಗೆ ಚಿಂತೆ ಕಾಡುತ್ತಿದ್ದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಅಭಿವೃದ್ದಿ ಕಾರ್ಯ ನೋಡಲಾಗದೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಇರದ ಹಿಂದುತ್ವ ಅಜೆಂಡಾ ಬಿಜೆಪಿಗೆ ಬಂದ ಮೇಲೆ ಬಂದಿದೆಯಾ ಪೊಳ್ಳು ಹಿಂದುತ್ವದ ಡೊಂಬರಾಟ ಹಳಿಯಾಳದಲ್ಲಿ ನಡೆಯಲ್ಲ ಮುಂದಿನ ಪುರಸಭೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಕಾಂಗ್ರೇಸ್ ಪಕ್ಷವೇ ಗೆಲ್ಲಲಿದ್ದು ಚುನಾವಣೆಯಲ್ಲಿ ಹೆಗಡೆ ತಮ್ಮ ಶಕ್ತಿ ತೊರಿಸಲಿ ಎಂದು ಸವಾಲ್ ಹಾಕಿದರು. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮಾತನಾಡಿ ಗೋ,ದನದ ಮಾಂಸದ ಮಾರುಕಟ್ಟೆ ಸರ್ಕಾರಿ ಜಾಗೆಯಲ್ಲಿ ಇಲ್ಲ ಖಾಸಗಿ ಜಾಗೆಯಲ್ಲಿ ಇರಬಹುದು ಅದು ನಮ್ಮ ಗಮನಕ್ಕೆ ಇಲ್ಲ ಇನ್ನೂ ಚಿಕನ್ ಅಂಗಡಿಗಳು ಹಲವಾರು ಬಿಜೆಪಿ ಮುಖಂಡರ ಒಡೆತನದ ಜಾಗೆಯಲ್ಲಿಯೇ ನಡೆಯುತ್ತಿದ್ದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕಾರ್ಯ ನಾವು ಮಾಡಲ್ಲ ಚಿಕನ್ ಅಂಗಡಿಕಾರರಿಗೆ ಪ್ರತ್ಯೇಕ ಮಾರುಕಟ್ಟೆಗೆ ಕ್ರೀಯಾಯೋಜನೆ ಮಾಡಿದ್ದು ಸದ್ಯದಲ್ಲೇ ಆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಪುರಸಭೆ ಸದಸ್ಯರಾದ ಫಯಾಜ ಶೇಖ ಹಾಗೂ ಇನಾಯಿತುಲ್ಲಾ ಬೇಪಾರಿ ಮಾತನಾಡಿ ಪಟ್ಟಣದಲ್ಲಿ ಸರ್ಕಾರಿ ಸ್ಥಳದಲ್ಲಿ ಎಲ್ಲೂ ಗೋಮಾಂಸ ಮಾರುಕಟ್ಟೆ ಇಲ್ಲ ಎಂದ ಅವರು ಪತ್ರಕರ್ತರ ಪ್ರಶ್ನೇಗೆ ಉತ್ತರಿಸುತ್ತಾ ಮೇದಾರಗಲ್ಲಿಯ ಹಿಂದಿನ ಕಸಾಯಿಗಲ್ಲಿಯ ರಸ್ತೆಯ ಮಧ್ಯೆ ಇರುವ ದನದ ಮಾಂಸ ಮಾರುಕಟ್ಟೆಯ ಕಟ್ಟಡ ಶತಮಾನಗಳಿಂದ ಇದ್ದು ಅದನ್ನು ತೆರವುಗೊಳಿಸುವ ಪ್ರಶ್ನೇಯೇ ಇಲ್ಲ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ ಬೊಳಶೆಟ್ಟಿ, ನಾಮನಿರ್ದೇಶಿತ ಸದಸ್ಯ ಅನಿಲ ಫರ್ನಾಂಡಿಸ್ ಇದ್ದರು.
Leave a Comment