ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ. ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ ರಸ್ತೆಯ ಪೆಟ್ರೋಲ್ ಪಂಪ ಹತ್ತಿರ ಇರುವ “ಡಾ.ಆಶಾ ಕ್ಲಿನಿಕ್” ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು ಮಾವ ಸಕ್ಕು ಬಾಬು ತೋರವತ ತಿಂಡಿ ತರಲೆಂದು ಹೊರಗೆ ಹೋಗಿ ಬರುವಷ್ಟರಲ್ಲಿ ಗರ್ಭೀಣಿ ನಾಪತ್ತೆಯಾಗಿದ್ದು ಅಕ್ಕ-ಪಕ್ಕ ಎಲ್ಲೆಡೆ ಸಾಕಷ್ಟು ಹುಡುಕಾಟ ನಡೆಸಿದರು ಆಕೆ ಪತ್ತೆಯಾಗದ್ದರಿಂದ ಕಂಗಾಲಾದ ಮಾವ ತಕ್ಷಣ ಮನೆಯವರಿಗೆ ವಿಷಯ ತಿಳಿಸಿದ್ದು ಅವರೆಲ್ಲರು ಹಳಿಯಾಳಕ್ಕೆ ಬಂದು ಮಂಗಳವಾರ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಮಾವ ಸಕ್ಕು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪೋಲಿಸರು ತನಿಖೆ ಕೈಗೊಂಡಿದ್ದಾರೆ. ಯುವತಿಯರು, ಮಹಿಳೆಯರು ಕಾಣೆಯಾಗಿರುವ ಸಾಕಷ್ಟು ಉದಾಹರಣೆಗಳನ್ನು ಕಂಡಿರುವ ಹಳಿಯಾಳಕ್ಕೆ ಇದೀಗ ತುಂಬು ಗರ್ಭೀಣಿಯೊರ್ವಳು ಕಾಣೆಯಾಗಿರುವ ಸುದ್ದಿ ಪಟ್ಟಣದಲ್ಲಿ ಬಹು ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದು ಬಿಸಿ ಬಿಸಿ ಚರ್ಚೆಯಾಗುತ್ತಿದೆ.
Leave a Comment