ಹೊನ್ನಾವರ : ತಾಲೂಕಿನ ಜಗತ್ ಪ್ರಸಿದ್ಧ ಪ್ರಾಚೀನ ದ್ವಿಭುಜ ಗಣಪತಿಯ ಸನ್ನಿಧಾನವಿರುವ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರ್ವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಕೆನರಾ ಬ್ಯಾಂಕ್ ನೀಡಿದ ಯಂತ್ರ ಫಟಕದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಸಂಭ್ರಮದಿಂದ ನಡೆಯಿತು. ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ರಿಸೀವರ್ ಆಗಿರುವ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠ್ಠಲ ಎಸ್.ಧಾರವಾಡಕರ ಅವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಕೆನರಾ ಬ್ಯಾಂಕಿನ ಬೆಳಗಾವಿ ವಿಭಾಗದ ಸಹಾಯಕ ಮಹಾ ಪ್ರಂಬಂಧಕ ಕೃಷ್ಣ ಎನ್.ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಬ್ಯಾಂಕಿನ ಈ ಕೊಡುಗೆ ಸದುಪಯೋಗಗೊಳ್ಳಲಿ ಎಂದು ಆಶಿಸಿದರು.
ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಮಂಜುನಾಥ ಭಟ್ಟರವರರು ಪೂಜಾ ಕಾರ್ಯಕ್ರಮ ನೆರವೇರಿಸಿ ಅನುಗ್ರಹ ಪ್ರಸಾದ ನೀಡಿದರು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ನ್ಯಾಯಾಲಯದ ಅಧಿಕಾರಿ ಸಿಬ್ಬಂದಿಗಳು, ಊರ ನಾಗರಿಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು
Leave a Comment